ಯೆಮೆನ್ ನಲ್ಲಿ ಹೌತಿ ಬಂಡುಕೋರರ ಅಟ್ಟಹಾಸ – ಕ್ಷಿಪಣಿ ದಾಳಿಯಲ್ಲಿ 17 ಜನರು ಬಲಿ
ಯೆಮನ್ : ಯುದ್ಧ ಪೀಡಿತ ರಾಷ್ಟ್ರ ಯೆಮೆನ್ ನಲ್ಲಿ ಹೌತಿ ಬಂಡುಕೋರರ ಕ್ಷಿಪಣಿ ದಾಳಿಯಲ್ಲಿ ಸುಮಾರು 17 ನಾಗರಿಕರ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕೇಂದ್ರ ನಗರವಾದ ಮಾರಿಬ್‌ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್‌ಗೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪ್ರಾಂತೀಯ ಗವರ್ನರ್ ಪತ್ರಿಕಾ ಕಾರ್ಯದರ್ಶಿ ಅಲಿ-ಅಲ್-ಗುಲಿಸಿ ತಿಳಿಸಿದ್ದಾರೆ.
ಹೌತಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 5 ವರ್ಷದ ಪುಟ್ಟ ಮಗು ಸಹ ಬಲಿಯಾಗಿದೆ.. ಇನ್ನೂ ರಾಷ್ಟ್ರದಲ್ಲಿ ಶಾಂತಿ ಕಾಪಾಡಿಕೊಳ್ಳಲು ಬಂಡುಕೋರರು ವಿಫಲವಾಗಿದ್ದಾರೆ ಎಂದು ಯೆಮನ್‌ನ ಅಮೆರಿಕ ರಾಯಭಾರಿ ಆರೋಪಿಸಿದ್ದಾರೆ.
ಈ ದಾಳಿಯಲ್ಲಿ ಕನಿಷ್ಠ 17 ನಾಗರಿಕರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಚಿವ ಮೌಮರ್ ಅಲ್-ಇರ್ಯಾನಿ ತಿಳಿಸಿದ್ದಾರೆ. ಇನ್ನೂ ದಾಳಿಯನ್ನು ಖಂಡಿಸುವಂತೆ ವಿಶ್ವಸಂಸ್ಥೆ ಹಾಗೂ ಅಮೆರಿಕಕ್ಕೆ ಕರೆ ನೀಡಿದ್ದಾರೆ.
ಇನ್ನೂ ಕ್ಷಿಪಣಿ ದಾಳಿಯ ಸ್ವಲ್ಪ ಸಮಯದ ಬೆನ್ನಲ್ಲೇ ಬಂಡುಕೋರರು ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆಸಿದ್ದಾರೆ ಎಂದೂ ವರದಿಯಾಗಿದೆ.. ಮತ್ತೊಂದೆಡೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಧಾವಿಸಿದ ಎರಡು ಆಂಬುಲೆನ್ಸ್‌ಗಳನ್ನು ನಾಶಪಡಿಸಿವೆ ಎಂದು ವರದಿಯಾಗಿದೆ.