ಸಲಾರ್ ನಂತರ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾಗಳು ಯಾವುವು…? ಯಾರ ಜೊತೆ..?
KGF ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರು ಸದ್ಯ KGF ಚಾಪ್ಟರ್ 2 ನ ನಂತರ ಬಾಹುಬಲಿ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದಾದ ನಂತರ ಪ್ರಸಾಂತ್ ನೀಲ್ ಯಾರ ಜೊತೆಗೆ ಯಾವ ಸಿನಿಮಾ ಮಾಡಲಿದ್ದಾರೆ ಅನ್ನೋ ಕುತೂಹಳು ಇವೆ.. ಈ ನಡುವೆ ದೊಡ್ಡ ದೊಡ್ಡ ಸ್ಟಾರ್ ನಟರು ಪ್ರಶಾಂತ್ ನೀಲ್ ಅವರೊಂದಿಗೆ ಸಿನಿಮಾ ಮಾಡುವ ಇಂಗಿತ ವ್ಯಕಲ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಸಾಂತ್ ನೀಲ್ ಟಾಲಿವುಡ್ ನ ಯಂಗ್ ಟೈಗರ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿರುವುದು ಕನ್ ಫರ್ಮ್ ಆಗಿದೆ.. ಇದರ ಹೊರತಾಗಿ ಇನ್ನೂ 3 ದೊಡ್ಡ ಪ್ರಾಜೆಕ್ಟ್ ಗಳನ್ನ ಕೈಗೆತ್ತಿಕೊಳ್ಳಲಿದ್ದಾರೆ ಪ್ರಶಾಂತ್ ನೀಲ್ ಎಂಬ ಸುದ್ದಿ ವ್ಯಾಪಕವಾಗಿ ಸದ್ದು ಮಾಡ್ತಿದೆ. 
ಸದ್ಯ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ.. ಇದಾದ ನಂತರ ಮತ್ತೊಂದು ಸಿನಿಮಾದಲ್ಲೀ ಈ ಜೋಡಿ ಒಂದಾಗಲಿದೆ ಎನ್ನುವ ಸುದ್ದಿ ಹರಿದಾ್ಡತಿದೆ. ಈ ಸಿನಿಮಾಗೆ ನಿರ್ಮಾಪಕ ದಿಲ್ ರಾಜು ಬಮಡವಾಳ ಹೂಡಬಹುದು ಎನ್ನಲಾಗ್ತಿದೆ. ಅಂದ್ಹಾಗೆ ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ಅಲ್ಲು ಅರ್ಜುನ್ ಅವರನ್ನ ಪ್ರಶಾಂತ್ ನೀಲ್ ಭೇಟಿ ಮಾಡಿದ್ದ ಫೋಟೋಗಳು ವೈರಲ್ ಆಗಿದ್ದವು.. ಗೀತಾ ಆರ್ಟ್ಸ್ ಸಂಸ್ಥೆಗೆ ಪ್ರಶಾಂತ್ ನೀಲ್ ಭೇಟಿ ನೀಡಿದ್ದರು. ಹೀಗಾಗಿ ಅಲ್ಲು ಅರ್ಜುನ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಕುರಿತು ಗೀತಾ ಆರ್ಟ್ಸ್ ಚರ್ಚಿಸಿದೆ ಎಂದು ಹೇಳಲಾಗ್ತಿದೆ. ಇನ್ನೂ ಭಾರತದ ಸೂಪರ್ ಹಿಟ್ ಸಿನಿಮಾ ಬಾಹುಬಲಿ ನಿರ್ಮಿಸಿದ್ದ ಡಿವಿವಿ ದಾನಯ್ಯ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡ್ತಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ನಾಯಕ ಆಗಬಹುದು ಎನ್ನಲಾಗ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








