ಪಕ್ಕದ ಕ್ಷೇತ್ರ ಗೆಲ್ಲಿಸಿಕೊಳ್ಳಲು ತಾಕತ್ತಿಲ್ಲದವ್ರು ಸಿಎಂ ಬಗ್ಗೆ ಮಾತಾಡ್ತಾರೆ : ರೇಣುಕಾಚಾರ್ಯ
ಬೆಂಗಳೂರು : ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಪಕ್ಕದಲ್ಲಿ ಒಂದು ಕ್ಷೇತ್ರ ಗೆಲ್ಲಿಸಿಕೊಳ್ಳುವ ತಾಕತ್ತಿಲ್ಲದವರು ಯಡಿಯೂರಪ್ಪ ಬಗ್ಗೆ ಮಾತಾಡ್ತಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ರಾಜೀನಾಮೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಕದಲ್ಲಿ ಒಂದು ಕ್ಷೇತ್ರ ಗೆಲ್ಲಿಸಿಕೊಳ್ಳುವ ತಾಕತ್ತಿಲ್ಲದವರು ಯಡಿಯೂರಪ್ಪ ಬಗ್ಗೆ ಮಾತಾಡ್ತಾರೆ.
ಯತ್ನಾಳ್ ಹುಚ್ಚು ಹುಚ್ಚಾಗಿ ಮಾತಾಡ್ತಿದ್ದಾರೆ. ಅವರ ವಿರುದ್ಧ ಏನೂ ಕ್ರಮ ಆಗಿಲ್ಲ. ಕಳೆದ ವಾರ 18 ಶಾಸಕರು ಹೋಗಿ, ನಾವು ಬೇಕಾದರೆ ದೆಹಲಿಗೆ ಹೋಗ್ತಿವಿ ಅಂದಿದ್ದೆವು.
ಅಂತದ್ದು ಏನು ಸಮಸ್ಯೆ ಇಲ್ಲ ಅಂತ ಯಡಿಯೂರಪ್ಪ ಹೇಳಿದರು. ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಯಾರೋ ಒಂದಿಬ್ಬರು ಅಪಪ್ರಚಾರ ಮಾಡುವ ಕೆಲಸ ಮಾಡ್ತಿದ್ದಾರೆ. ನಾನು ಇದರ ಬಗ್ಗೆ ಅವರ ಜೊತೆ ಚರ್ಚೆ ಮಾಡ್ತೇನೆ. ನಾವು ಯಡಿಯೂರಪ್ಪ ಜೊತೆಗಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಕೆಲವರಿಗೆ ಪಕ್ಕದ ಕ್ಷೇತ್ರ ಗೆಲ್ಲಿಸುವ ತಾಕತ್ತು ಇಲ್ಲ. ಆದರೂ ಕೆಲವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮಾತನಾಡ್ತಾರೆ.
ಇದನ್ನು ಪ್ರತಿಪಕ್ಷ ಗಳು ಸದುಪಯೋಗ ಮಾಡಿಕೊಳ್ತಾರೆ. ಚುನಾವಣೆಯಲ್ಲಿ ಸೋತವರು ಕೈಕಾಲು ಹಿಡಿದು, ಬೆಗ್ ಮಾಡಿ ಮಂತ್ರಿ ಆಗಿದ್ದಾರೆ.
ಬೇರೆ ಬೇರೆ ಪಕ್ಷಕ್ಕೆ ಹೋಗಿ, ಬೇರೆ ಬೇರೆ ಪಕ್ಷದಲ್ಲಿ ಓಡಾಡಿ ಸೈಕಲ್ ಹತ್ತಿ ಇಳಿದವರು ಯಡಿಯೂರಪ್ಪ ನವರ ನಾಯಕತ್ವದ ಬಗ್ಗೆ ಮಾತನಾಡ್ತಾರೆ ಎಂದು ಯೋಗೇಶ್ವರ್ ವಿರುದ್ಧ ಬೆಂಕಿಕಾರಿದರು.









