ಕೆಸಿಆರ್ ಅಡ್ಡಾದಲ್ಲಿ ಹಾರಾಡಲಿದೆ ವೈಎಸ್ ಆರ್ ಬಾವುಟ
ಹೈದರಾಬಾದ್ : ಕೆ. ಚಂದ್ರ ಶೇಖರ್ ರಾವ್ ಕೋಟೆಯಲ್ಲಿ ವೈಎಸ್ ಆರ್ ಬಾವುಟ ಹಾರಿಸಲು ಮುಹೂರ್ತ ಫಿಕ್ಸ್ ಆಗಿದೆ.
ತೆಲಂಗಾಣದಲ್ಲಿ ವೈಎಸ್ ರಾಜಶೇಖರ್ ರೆಡ್ಡಿ ಜಯಂತಿ ದಿನವಾದ ಜುಲೈ 8 ರಂದು ವೈ ಎಸ್ ಆರ್ ಟಿ( ವೈಎಸ್ ಆರ್ ತೆಲಂಗಾಣ ) ಪಾರ್ಟಿ ಸ್ಥಾಪನೆಗೊಳ್ಳಲಿದೆ.
ಈ ಬಗ್ಗೆ ಪಕ್ಷದ ಸಮನ್ವಯಧಿಕಾರಿ ವಡುಗಾ ರಾಜಗೋಪಾಲ್ ಮಾಹಿತಿ ನೀಡಿದ್ದು, ಪಕ್ಷದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ವೈಎಸ್ ಆರ್ ತೆಲಂಗಾಣ ಪಕ್ಷಕ್ಕೆ (ವೈಎಸ್‍ಆರ್‍ಟಿಪಿ) ನೋಂದಣಿಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.
ನೂತನ ರಾಜಕೀಯ ಪಕ್ಷದ ಹೆಸರಿಗೆ ಸಂಬಂಧಿಸಿದಂತೆ ತಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ವೈಎಸ್‍ಆರ್‍ಪಿ ಗೌರವಾಧ್ಯಕ್ಷೆ ವೈ. ಎಸ್.ವಿಜಯಮ್ಮ ಹೇಳಿದ್ದಾರೆ. ಇದಕ್ಕೆ ಸಂಬಂಧ ಪತ್ರವನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದ್ದಾರೆ.