ಲಾಕ್ ಡೌನ್ ಮುಗಿಯುತ್ತಿದ್ದಂತೆ ಬೆಂಗಳೂರು ಮಂದಿಗೆ ಕಾದಿದೆ ಶಾಕ್..!
ಬೆಂಗಳೂರು : ಕೊರೊನಾ ಸಂಕಷ್ಟ, ತೈಲ ಬೆಲೆ ಏರಿಕೆ, ನೌಕರ ಮುಷ್ಕರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ನಡೆಸಿದೆ.
ಡಿಸೇಲ್ ಬೆಲೆ ಗಣನೀಯ ಏರಿಕೆ ಬೆನ್ನಲ್ಲೇ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಹಿಂದೆ ಬಜೆಟ್ ಸಂದರ್ಭದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಆಗ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆಯನ್ನ ತಿರಸ್ಕರಿಸಿತ್ತು.
ಕಳೆದ ವರ್ಷ ಮಾರ್ಚ್ ವೇಳೆಗೆ 49.98 ಪೈಸೆ ಡಿಸೇಲ್ ಬೆಲೆ ಇತ್ತು. ಆದ್ರೆ ಕಳೆದ ಜನವರಿಯಲ್ಲೆ ಡಿಸೇಲ್ ಬೆಲೆ 78 ರೂಪಾಯಿ ಹೆಚ್ಚಳವಾಗಿತ್ತು.
ಒಂದು ವರ್ಷದಲ್ಲೇ 30 ರೂಪಾಯಿ ಡಿಸೇಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.
ಜೊತೆಗೆ ಕೊರೋನಾ ಎಫೆಕ್ಟ್ ಹಾಗೂ ಮುಷ್ಕರದಿಂದಾಗಿ ಬಿಎಂಟಿಸಿ ಬಸ್ ಸಂಚಾರದ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ಐಟಿಬಿಟಿ ಕಂಪನಿಗಳ ಜನ ಹೆಚ್ಚು ಬಿಎಂಟಿಸಿ ಬಸ್ ಬಳಸುತ್ತಿದ್ರು. ಈಗ ಐಟಿಬಿಟಿ ಕಂಪನಿಗಳು ಇಲ್ಲದ ಕಾರಣ ಆ ಬಸ್ ಗಳು ಕಾರ್ಯಚರಣೆ ಇಲ್ಲದೆ ನಿಂತಿವೆ.
ಹಿನ್ನಲೆ ಸರ್ಕಾರಕ್ಕೆ ಮುಂದೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಟಿಸಿ ಮತ್ತೊಮ್ಮೆ ಪ್ರಸ್ತಾವನೆ ಇಟ್ಟಿದೆ.
18%, 20% ಟಿಕೆಟ್ ದರ ಹೆಚ್ಚಿಸುವಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಾರಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಲಾಕ್ ಡೌನ್ ಮುಗಿಯುತ್ತಿದ್ದಂತೆ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.