ಬೆಂಗಳೂರು: ಪಾದರಾಯನಪುರ ಘಟನೆಯನ್ನು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ಖಂಡಿಸಿದ್ದು, ಇಂಥವರ ಜೊತೆ ಮಾತುಕತೆ ನಿಲ್ಲಿಸಿ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದಿದ್ದಾರೆ.
https://twitter.com/b_yatnal/status/1252126708771086341?s=20
“ಮುಖ್ಯಮಂತ್ರಿಗಳೇ, ದೇಶ ದ್ರೋಹಿಗಳನ್ನ ಕಾನೂನು ಮುರಿಯುವ ಗುಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಅಂತಹ ಶಾಸಕರ ವಿರುದ್ಧ ಎಸ್ ಎಸ್ ಎ ಕೆಳಗೆ ಕೇಸು ದಾಖಲಿಸಿ.ಮೃದು ಧೋರಣೆ ಸರಿಯಲ್ಲ. ಅಂತವರ ಜೊತೆ ಮಾತುಕತೆ ನಿಲ್ಲಿಸಿ . ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ” ಗುಂಡಂದಶಗುಣಂ” ಇಲ್ಲದಿದ್ದರೆ…” ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆ ಪಾದರಾಯನಪುರದಲ್ಲಿ ನಡೆದ ಗಲಾಟೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಗಲಾಟೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಅವರ ಪೈಕಿ 100 ಜನರ ಗುರುತು ಪತ್ತೆ ಹಚ್ಚಿ, ಪಟ್ಟಿ ಸಿದ್ಧಪಡಿಸಿಕೊಂಡಿರೋ ಪೊಲೀಸರು ಆರೋಪಿಗಳನ್ನು ಬಂಧಿಸಲು ರಾತ್ರಿಯಿಂದಲೇ ತಯಾರಿ ನಡೆಯುತ್ತಿದ್ದಾರೆ. ಅದರಂತೆ ಸದ್ಯ 50 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.








