ಲಡಾಖ್ನ ಪೂರ್ವ ಭಾಗದ ಹೊರಗೆ ಭೂಪ್ರದೇಶದಲ್ಲಿ ತಾಲೀಮು ನಡೆಸಿದ ಚೀನಾ ಯುದ್ಧ ವಿಮಾನಗಳು – ಬಾರತೀಯ ಸೇನೆ ಅಲರ್ಟ್
ನವದೆಹಲಿ: ಲಡಾಖ್ ನ ಪೂರ್ವ ಭಾಗದ ಹೊರಗಡೆ ಚೀನಾದ ಭೂಪ್ರದೇಶದಲ್ಲಿ ಚೀನಾ ಸೇನೆಯು ಯುದ್ಧ ವಿಮಾನಗಳ ತಾಲೀಮು ನಡೆಸಿವೆ. ಈ ಬೆಳವಣಿಗೆಗಳ ಮೇಲೆ ಭಾರತೀಯ ಸೇನೆಯು ನಿಗಾ ವಹಿಸಿದೆ. ಜೆ-11 ಸೇರಿದಂತೆ 21-22 ಯುದ್ಧ ವಿಮಾನಗಳು ತಾಲೀಮು ನಡೆಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತದ ಗಡಿ ಪ್ರದೇಶದಿಂದ ಆಚೆ ಇರುವ ಹೋಟನ್, ಗರ್ ಗುನ್ಸಾ ಮತ್ತು ಕಶYರ್ ವಾಯುನೆಲೆಗಳಿಂದ ಈ ಸಮರ ತಾಲೀಮು ನಡೆಸಲಾಗಿದೆ. ಇತ್ತೀಚೆಗಷ್ಟೇ ಅವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ತಾಲೀಮು ನಡೆಸಿದ ಸಂದರ್ಭದಲ್ಲಿ ವಿಮಾನಗಳು ತಮ್ಮ ದೇಶದ ಬಾಹ್ಯಾಕಾಶದ ಪ್ರದೇಶಕ್ಕೆ ಹಾರಾಟ ಸೀಮಿತಗೊಳಿಸಿದ್ದವು.
ಕೋವಿಡ್ ಸಂಕಷ್ಟ – ವಿದೇಶಿ ಪ್ರಯಾಣಿಕರಲ್ಲಿ ಮತ್ತೊಂದು ರೂಪಾಂತರಿ ಕೊರೊನಾ ವೈರಸ್ ಪತ್ತೆ..!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.