ನೂತನ ಚುನಾವಣಾ ಆಯುಕ್ತರಾಗಿ ಅನುಪ್ ಚಂದ್ರ ಪಾಂಡೆ ಅಧಿಕಾರ
ನವದೆಹಲಿ : ದೇಶದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅನುಪ್ ಚಂದ್ರ ಪಾಂಡೆ ಅಧಿಕಾರ ಸ್ವೀಕರಿಸಿದ್ದಾರೆ.
ಇವರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅನುಪ್ ಚಂದ್ರ ಪಾಂಡೆ ಅವರು ರಾಷ್ಟ್ರಪತಿಯಿಂದ ಈ ಹುದ್ದೆಗೆ ನೇಮಕಗೊಂಡಿದ್ದು, ಬುಧವಾರ ನೂತನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿದ್ದಾರೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ನಿವೃತ್ತಿಯ ನಂತರ ಏಪ್ರಿಲ್’ನಲ್ಲಿ ಖಾಲಿಯಾದ ಹುದ್ದೆಗೆ ಅನುಪ್ ಚಂದ್ರ ಪಾಂಡೆ ಅವರನ್ನ ಆಯ್ಕೆ ಮಾಡಲಾಗಿದೆ.









