“ರಾವಣ ರಾಜ್ಯದಲ್ಲಿ 59 ರೂ. ರಾಮ ರಾಜ್ಯದಲ್ಲಿ 100 ರೂ. ವರ್ಸ್ಟ್ ಪ್ರೈಮಿನಿಸ್ಟರ್”
ಬೆಂಗಳೂರು : ಇಂತಹ ಕೆಟ್ಟ ಸರ್ಕಾರವನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ವರ್ಸ್ಟ್ ಚೀಫ್ ಮಿನಿಸ್ಟರ್, ವರ್ಸ್ಟ್ ಪ್ರೈಮಿನಿಸ್ಟರ್ ಎಂದು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಪದೇ ಪದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಕ್ ಬಾಣಗಳನ್ನು ಎಸೆದ ಸಿದ್ದರಾಮಯ್ಯ, ಇಂತಹ ಕೆಟ್ಟ ಸರ್ಕಾರವನ್ನು ನಾನು ಇತಿಹಾಸದಲ್ಲಿ ನೋಡಿಲ್ಲ.
ವರ್ಸ್ಟ್ ಚೀಫ್ ಮಿನಿಸ್ಟರ್, ವರ್ಸ್ಟ್ ಪ್ರೈಮಿನಿಸ್ಟರ್. ಐದು ರಾಜ್ಯದ ಚುನಾವಣೆ ಫಲಿತಾಂಶ ಬಂದ ನಂತರ 19 ಸಾರಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಇದನ್ನು ಸರ್ಕಾರ ಅನ್ನಲು ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಜನರು ತೆರಿಗೆ ಇಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಒತ್ತಡ ತರಬೇಕು. ಪಾಕಿಸ್ತಾನದಲ್ಲಿ 59, ಶ್ರೀಲಂಕಾ 59 ರೂ. ಇದೆ. ರಾವಣದ ರಾಜ್ಯದಲ್ಲಿ 59 ರೂ. ಇದ್ದರೆ ರಾಮನ ರಾಜ್ಯದಲ್ಲಿ 100 ರೂ. ಇದೆ. ನಾಚಿಕೆ ಆಗಲ್ವಾ ಎಂದು ಗರಂ ಆದರು.