ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಡ್ರಗ್ ವ್ಯಸನಿಯ ಮಗ ಫ್ಲೈ ಮೇ ವೆದರ್ ಮನಿಮ್ಯಾನ್ ಬಾಕ್ಸರ್ ಆಗಿದ್ದು ಹೇಗೆ ?

admin by admin
June 12, 2021
in Newsbeat, Sports, ಕ್ರೀಡೆ
Floyd Mayweather Lifestyle saakshatv
Share on FacebookShare on TwitterShare on WhatsappShare on Telegram

ಡ್ರಗ್ ವ್ಯಸನಿಯ ಮಗ ಫ್ಲೈ ಮೇ ವೆದರ್ ಮನಿಮ್ಯಾನ್ ಬಾಕ್ಸರ್ ಆಗಿದ್ದು ಹೇಗೆ ?

ಪಂಚಿಂಗ್ ಮಾಸ್ಟರ್ ನ ಲೈಫ್ ಫುಲ್ ಬಿಂದಾಸ್….!

Related posts

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

December 15, 2025
45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

December 15, 2025

Floyd Mayweather Lifestyle saakshatv ಆತ ವಿಶ್ವ ಬಾಕ್ಸಿಂಗ್ ನ ಬಾಸ್… ಬಾಕ್ಸಿಂಗ್ ರಿಂಗ್ ಆತನ ಬಿಸಿನೆಸ್. ಅವನ ಪಂಚ್ ಗೆ ಎದುರಾಳಿ ಖಲಾಸ್. ನೀರಿನಂತೆ ಹರಿದು ಬರುತ್ತಿದೆ ಕಾಸು. ಅದನ್ನು ಎಣಿಸಲು ಮನೆಯಲ್ಲಿದ್ದಾರೆ ಸ್ವೀಟ್ ಲೇಡಿಸ್. ಪಂಚಿಂಗ್ ಮಾಸ್ಟರ್ ನ ಲೈಪ್ ಫುಲ್ ಬಿಂದಾಸ್.

ಹೌದು, ಆಮೆರಿಕಾದ ಬಾಕ್ಸರ್ ಪ್ಲೈಡ್ ಮೇ ವೆದರ್ ಮಾಡಿರುವ ಹವಾ ಅಷ್ಟಿಷ್ಟಲ್ಲ.
ಯಾಕಂದ್ರೆ ಮೇ ವೇದರ್ಗ್ ಸಾವಿರ, ಲಕ್ಷ, ಕೋಟಿ ಎಲ್ಲಾ ಚಿಲ್ಲರೆ ದುಡ್ಡು. ಏನಿದ್ರೂ ನೂರು, ಇನ್ನೂರು, ಐನೂರು ಕೋಟಿಯ ಲೆಕ್ಕಾಚಾರ.

ಕಾಂಚಾಣ ಜೊತೆ ಸರಸವಾಡುತ್ತಿರುವ ಫ್ಲೈ ಮೇ ವೆದರ್..!

ಬಾಕ್ಸಿಂಗ್ ಅಖಾಡವನ್ನು ಮೇ ವೆದರ್ ಕೋಟಿ ಕೋಟಿ ಲೆಕ್ಕದಲ್ಲಿ ಅಳೆಯುತ್ತಾನೆ. ತಾನು ಕೊಡುವ ಒಂದೊಂದು ಪಂಚ್ ಗೆ ಎಷ್ಟು ಹಣ ಬರುತ್ತದೆ.
ಪ್ರತಿ ದಿನ ನಡೆಸುವ ಅಭ್ಯಾಸಕ್ಕಾಗಿ ಎಷ್ಟು ಹಣ ಖರ್ಚಾಗುತ್ತದೆ. ತನ್ನ ವಿಲಾಸಿ ಜೀವನಕ್ಕೆ ಎಷ್ಟು ಕೋಟಿ ವ್ಯಯವಾಗುತ್ತದೆ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ರೆ ಎಷ್ಟು ದುಡ್ಡು ಬರುತ್ತದೆ. ಹೀಗೆ ಎಲ್ಲವನ್ನೂ ಪ್ಲಸ್- ಮೈನಸ್, ಗುಣಾಕಾರ, ಭಾಗಕಾರ ಮಾಡಿಕೊಂಡೇ ಮೇ ವೆದರ್ ಕಾಂಚಾಣ ಜತೆ ಸರಸ ಆಡುತ್ತಾನೆ.

Floyd Mayweather Lifestyle saakshatv 50 ಸ್ಪರ್ಧೆ … ಗಳಿಸಿದ ಸಂಪಾದನೆ ಕೋಟಿ ಕೋಟಿ…!

ಅಂದ ಹಾಗೇ, ಮೇ ವೆದರ್ ಬಾಕ್ಸಿಂಗ್ ರಿಂಗ್ ನಿಂದಲೇ ಸುಮಾರು 2500 ಕೋಟಿಗೂ ಹೆಚ್ಚು ಹಣವನ್ನು ಸಂಪಾದನೆ ಮಾಡಿರುವ ಶ್ರೀಮಂತ. ಬ್ಯಾಂಕ್ ಖಾತೆಯಲ್ಲಿ 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಠೇವಣಿಯಾಗಿಟ್ಟಿದ್ದಾನೆ. ಅಷ್ಟಕ್ಕೂ ಮೇ ವೆದರ್ ಸ್ಪರ್ಧಿಸಿರುವುದು ಕೇವಲ 50 ಸ್ಪರ್ಧೆಗಳಲ್ಲಿ.

ಅಂದ ಮೇಲೆ ಗೊತ್ತಾಗುತ್ತದೆ ಮೇ ವೆದರ್ ದುಡ್ಡಿನ ಜತೆ ಎಷ್ಟೆಲ್ಲಾ ಆಟವಾಡಿರಬಹುದು. ಈ ದುಡ್ಡಿಗಾಗಿ ಆತ ಒಂದೇ ಒಂದು ಸ್ಪರ್ಧೆಯನ್ನು ಸೋತಿಲ್ಲ. ಸೋಲು ಅನ್ನೋದು ಆತನ ಜಾಯಮಾನದಲ್ಲೇ ಇಲ್ಲ. ಅಷ್ಟೇ ಅಲ್ಲ, ಸೋಲನ್ನು ಮೇ ವೆದರ್ ಒಪ್ಪಿಕೊಳ್ಳಲು ಕೂಡ ಸಿದ್ದನಿಲ್ಲ. ಯಾರಿಗೂ ಶರಣಾಗಬಾರದು. ಯಾರ ಮುಂದೆಯೂ ತಲೆ ಬಾಗಬಾರದು. ಎದೆ ಉಬ್ಬಿಸಿಕೊಂಡು ನಡೆದಾಡಬೇಕು. ಅದಕ್ಕಾಗಿ ಮೇ ವೆದರ್ ಏನು ಮಾಡಲು ಕೂಡ ರೆಡಿಯಾಗಿದ್ದ.

ಮನೆಯೇ ಸ್ವರ್ಗಲೋಕ.. ಏನುಂಟು ಏನಿಲ್ಲ…!

Floyd Mayweather Lifestyle saakshatv ಅಷ್ಟಕ್ಕೂ ಲೈಫ್ ಅನ್ನು ಹೇಗೆ ಎಂಜಾಯ್ ಮಾಡಬೇಕು ಎಂಬುದನ್ನು ಮೇ ವೆದರ್ ನಿಂದ ನೋಡಿ ಕಲಿಯಬೇಕು. ಕೆರೆಯ ನೀರು ಕೆರೆಗೆ ಅನ್ನೋ ಹಾಗೇ ದುಡಿದಿರುವ ಹಣವನ್ನು ಖರ್ಚು ಮಾಡುವುದು ಮೇ ವೆದರ್ನ ಅಜನ್ಮ ಸಿದ್ಧಾಂತವೂ ಹೌದು. ಅದಕ್ಕಾಗಿ ಮೇ ವೆದರ್ ಮನೆಯಲ್ಲಿ 50 ಕೋಟಿಗೂ ಹೆಚ್ಚು ಹಣವನ್ನಿಟ್ಟುಕೊಳ್ಳುತ್ತಾನೆ.

ಹೀಗೆ ಮನೆಯಲ್ಲಿ ಕೋಟಿ ಕೋಟಿ ಹಣ ಬಿದ್ದಿರುವಾಗ ಮೋಜು, ಮಸ್ತಿಗೆ ಏನು ಕಮ್ಮಿ ಇಲ್ಲ. . ಮೇ ವೆದರ್ ಜೀವನ ಅಂದ್ರೆ ಅದು ನಾವು ನೀವು ಕಂಡಂತಹ ರಾಯಲ್ ಜೀವನ ಅಲ್ಲ. ಬದಲಾಗಿ ಅದಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ರಾಯಲ್ ಆಗಿರುವ ಬದುಕು. ಮೇ ವೆದರ್ ಅನ್ನೋ ಲೆಜೆಂಡ್ ಬದುಕುತ್ತಿರುವ ಬದುಕು ವಿಶ್ವಕ್ಕೆ ಅಚ್ಚರಿ ಮೂಡಿಸುವಂತಹದ್ದಾಗಿದೆ.

ಬಾಕ್ಸಿಂಗ್ ರಿಂಗ್ ನಲ್ಲಿ ತಿಂದ ಪ್ರತಿ ಏಟುಗಳು ಕೋಟಿಗಳನ್ನು ಕಡಿಮೆ ಗೊಳಿಸುತ್ತಿದ್ರೆ, ಕೊಡುತ್ತಿದ್ದ ಪ್ರತಿ ಏಟು ಕೋಟಿ ಕೋಟಿ ರೂಪಾಯಿಗಳನ್ನು ಏರಿಸುತ್ತಿತ್ತು. ಅದರಂತೆ ಎಂದಿಗೂ ಏಟು ತಿನ್ನುವುದನ್ನು ರೂಢಿಸಿಕೊಳ್ಳದೇ ಕೊಡುವುದನ್ನೇ ಕಲಿತಿರುವ ಮೇ ವೆದರ್ ಕೋಟಿ ಕೋಟಿ ರೂಪಾಯಿ ಜೇಬಿಗಿಳಿಸಿದ್ದಾನೆ.

ಅದರಂತೆ ಜೀವನವನ್ನು ಸಾಗಿಸುತ್ತಿದ್ದಾನೆ. ರಾಯಲ್ ಆಗಿ ಕಟ್ಟಿರುವ ಮನೆ. ಇನ್ನು ಆ ಮನೆ ತುಂಬ ನಲಿಯುತ್ತಾ, ಕುಣಿಯುತ್ತಾ ಸದಾ ಜೊತೆಗಿರುತ್ತಾರೆ ಲಲನೆಯರು. ಅಲ್ಲದೇ ಮನೆಯೊಳಗೇ ನಿರ್ಮಾಣವಾಗಿರುವ ಸ್ವಿಮ್ಮಿಂಗ್ ಫೂಲ್ ನಿಂದಲೇ ಟಿವಿ ನೋಡುತ್ತಾ, ಬೇಕು ಬೇಕಾದ ಚಾನೆಲ್ ಹಾಕಿಕೊಂಡು ಎಂಜಾಯ್ ಮಾಡ್ತಾರೆ.

Floyd Mayweather Lifestyle saakshatv ಫ್ಲೈಡ್ ಮೇ ವೆದರ್ ನಲ್ಲಿದೆ ಸೂಪರ್ ಸ್ಪೇಷಲಾಟಿ ಹಡಗು..!

ಹಾಗಂತ ಮೇ ವೆದರ್ ಅಷ್ಟಕ್ಕೆ ಸುಮ್ಮನಾಗಲ್ಲ, ಸೂಪರ್ ಸ್ಪೆಷಾಲಿಟಿ ಹೊಂದಿರುವ ಹಡಗುಗಳನ್ನು ಹೊಂದಿದ್ದಾನೆ. ಹಡಿಗಿನಲ್ಲೇ ಸ್ವಿಮಿಂಗ್ ಫೂಲ್ ನ್ನು ನಿರ್ಮಿಸಿಕೊಂಡಿದ್ದಾನೆ. ಸುಂದರಿಯರ ಜೊತೆ ಸಮುದ್ರದಲ್ಲಿ ಜಾಲಿ ರೈಡ್ ಮಾಡುವ ಮೇ ವೆದರ್ ಕೆಲವೊಂದು ಸಲ ಹುಚ್ಚು ಸಾಹಸಕ್ಕೂ ಮುಂದಾಗ್ತಾರೆ. ಹಡಗಿನಲ್ಲಿ ಪ್ರಯಾಣ ಮಾಡುವಾಗ ಇದಕ್ಕಿಂದ್ದಂತೆ ನೇರವಾಗಿ ಸಮುದ್ರಕ್ಕೆ ಧಮುಕಿ ಸ್ವಿಮ್ಮಿಂಗ್ ಮಾಡಿಯೂ ಸೈ ಎನಿಸಿಕೊಳ್ಳುತ್ತಾನೆ.
ಮೇ ವೆದರ್ ತನ್ನ ಕಾಸಿಗೆ ತಕ್ಕಂತೆ ಚಟಗಳನ್ನು ತೀರಿಸಿಕೊಳ್ತಿದ್ದಾನೆ. ಆತನ ಮನೆಯಲ್ಲೇ ಹುಡುಗಿಯರು ನಂಗಾನಾಚ್ ಮಾಡುತ್ತಾರೆ.. ಅದರಲ್ಲೂ ಒಬ್ಬರು ಇಬ್ಬರಲ್ಲ ಹತ್ತಕ್ಕೂ ಹೆಚ್ಚು ಮಂದಿ ಟೂ ಪೀಸ್ ನಲ್ಲಿ ಕುಣಿಯುತ್ತಿದ್ರೆ ಮೇ ವೆದರ್ ಅವರನ್ನು ನೋಡುತ್ತಾ ಮಜಾ ತೆಗೆದುಕೊಳ್ಳುತ್ತಾನೆ.

Floyd Mayweather Lifestyle saakshatv ಮೇ ವೆದರ್ ಗೆ ಹೆಣ್ಣು, ಚಿನ್ನ, ದುಡ್ಡು ಸದಾ ಜೊತೆಯಲ್ಲೇ ಇರಬೇಕು..!

ಹಾಗೇ ಮೇ ವೆದರ್ ಗೆ ಜುವೆಲ್ಲರಿಗಳು, ವಾಚ್ ಅಂದ್ರೆ ತುಂಬಾನೇ ಇಷ್ಟ..ಅಷ್ಟಕ್ಕೆ ಆತನ ಆಸೆಗಳು ಮುಗಿಯುವುದಿಲ್ಲ. ಆತ ವರ್ಷಕ್ಕೆ ಬೇಕಾದಷ್ಟು ವಾಚ್ ಗಳನ್ನು ಹೊಂದಿದ್ದಾನೆ. ಎಲ್ಲವೂ ಕೂಡ ಚಿನ್ನ ಮತ್ತು ವಜ್ರ ಲೇಪಿತವಾಗಿರುವ ವಾಚ್‍ಗಳು. ಹೀಗೆ ತನ್ನ ಪವರ್ ಫುಲ್ ಪಂಚ್ ಹಾಗೂ ಹಣದ ಮೂಲಕ ತನ್ನೆಲ್ಲಾ ಚಟಗಳನ್ನು ತೀರಿಸಿಕೊಳ್ಳುತ್ತಾನೆ ಈ ಬಾಕ್ಸಿಂಗ್ ಕಿಂಗ್.

ಮೇ ವೆದರ್ ಕಾಸಿಗೆ ಬಾಸ್ ಆದಾಗಿನಿಂದ ಈತನ ಸುತ್ತಮುತ್ತ ಹುಡುಗಿಯರು ಸುತ್ತುವರಿಯುತ್ತಾರೆ..ಇವನಿಗೆ ಬೇಕು ಬೇಕೆಂದಾಗ ಬೇರೆ ಬೇರೆ ಹುಡುಗಿಯರನ್ನು ಕರೆಸಿ ಮಜಾ ಮಾಡುವುದೇ ಒಂಥಾರ ಹವ್ಯಾಸವಾಗಿಬಿಟ್ಟಿದೆ. ಎಣಿಕೆ ಮಾಡಲು ಹೋದ್ರೆ ಸುಮಾರು ಹತ್ತಕ್ಕೂ ಹೆಚ್ಚು ಪ್ರೇಯಸಿಯರಿದ್ದಾರೆ. ಇನ್ನು ಬಂದು ಹೋಗುವವರು ಲೆಕ್ಕಕ್ಕೆ ಸಿಗುತ್ತಿಲ್ಲ..ಪ್ರತಿನಿತ್ಯವು ಈತನ ಮನೆಯಲ್ಲಿ ಪಬ್ ನ ವಾತಾವರಣ, ಹುಡುಗಿಯ ನರ್ತನ ಎಲ್ಲವೂ ಸಾಂಗವಾಗಿ ನಡೆಯಲೇಬೇಕು. ಜತೆಗೆ ಮೇ ವೆದರ್ ಗೆ ಸ್ನಾನ ಮಾಡಿಸಲು ದಿನಕ್ಕೊಬ್ಬಳು ಹುಡುಗಿ ಬೇಕು. ಬಾತ್ ಟಬ್ ನಲ್ಲಿ ಕುಳಿತುಕೊಳ್ಳುವ ಈತನಿಗೆ ಸ್ನಾನ ಮಾಡಿಸೋ ವೀಡಿಯೋ ಯೂ ಟ್ಯೂಬ್ ನಲ್ಲಿ ಭಾರೀ ಫೇಮಸ್ .

ಮೇ ವೆದರ್ ಗುರಿ ಏನಿದ್ರೂ ಹಣ ಮಾಡಬೇಕು ಅಷ್ಟೇ. ಅದಕ್ಕಾಗಿಯೇ ತನ್ನ ತಂಡಕ್ಕೆ ದಿ ಮನಿ ಟೀಮ್ ಇಂತ ಹೆಸರಿಟ್ಟಿದ್ದಾನೆ. ಹಣದ ಮೂಟೆಯ ಮೇಲೆ ಮಲಗುವ ಖಯಾಳಿಯನ್ನು ಮೇ ವೆದರ್ ಬೆಳೆಸಿಕೊಂಡಿದ್ದಾನೆ.

Floyd Mayweather Lifestyle saakshatv ಮನೆಯಲ್ಲಿದೆ ವಿಶ್ವದ ದುಬಾರಿ ಕಾರುಗಳು ಮತ್ತು ಪ್ರೈವೆಟ್ ಜೆಟ್ ಗಳು..!

ಇನ್ನು, ಮೇ ವೆದರ್ ಗೆ ಕಾರು ಅಂದ್ರೆ ಬಲು ಪ್ರೀತಿ..ಅವನು ಕಾಸ್ಟ್ಲಿ ಕಾರುಗಳನ್ನು ಪರ್ಚೇಸ್ ಮಾಡುತ್ತಲೇ ಇರುತ್ತಾನೆ. ಅವನ ಕಾರು ನಿಲ್ಲಿಸಲು ಒಂದು ಎಕರೆಯಷ್ಟು ಜಾಗವನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಒಂದೊಂದು ಕಾರುಗಳು ಕೂಡ ಐದೈದು ಕೋಟಿಗಿಂತಲೂ ಅಧಿಕ ಬೆಲೆಬಾಳುವಂತಹದ್ದಾಗಿದೆ.

Floyd Mayweather Lifestyle saakshatv ಅಷ್ಟೇ ಅಲ್ಲ, ವೆದರ್ ಐದು ಪ್ರೈವೆಟ್ ಜೆಟ್ ವಿಮಾನಗಳನ್ನು ಹೊಂದಿದ್ದಾನೆ. ಆ ವಿಮಾನಗಳನ್ನು ಮತ್ತು ನೂರಕ್ಕೂ ಹೆಚ್ಚು ಐಷಾರಾಮಿ ಕಾರನ್ನು ನಿಲ್ಲಿಸಲು ಒಟ್ಟು ಮೂರು ಎಕರೆಗೂ ಹೆಚ್ಚು ಜಾಗವನ್ನು ನಿಗದಿಪಡಿಸಲಾಗಿದೆ.

ಐಷಾರಾಮಿ ಕಾರುಗಳಾದ ಬೆಂಟ್ಲೆ ಮುಲ್ಸನ್, ರೋಲ್ಸ್ ರಾಯ್ಸ್ ಡ್ರಾಪ್ ಹೆಡ್, ಫೆರರಿ 599, ಫೆರರಿ 458, ರೋಲ್ಸ್ ರಾಯ್ಸ್ ಪಾಂಟಮ್, ಮರ್ಸಿಡೀಸ್, ಲಾಂಬೋರ್ಗಿನಿ, ಬುಗಟಿ ವೆರಾನ್, ಹೀಗೆ ನೂರಕ್ಕೂ ಹೆಚ್ಚು ಕಾರುಗಳನ್ನು ಮೇ ವೆದರ್ ಹೊಂದಿದ್ದಾನೆ

ಇಷ್ಟೆಲ್ಲಾ ಐಷಾರಾಮಿ ಜೀವನ ಸಾಗಿಸುತ್ತಿರುವ ಮೇ ವೆದರ್ ನ ಲೈಫ್ ಈಸ್ ಸೋ ಬ್ಯೂಟಿಫುಲ್. ಹಾಗೇ ಕಾಂಪಿಟಿಷನ್ ನಲ್ಲೂ ಅಷ್ಟೇ ಪವರ್ಫುಲ್. ಅಭಿಮಾನಿಗಳ ಪಾಲಿಗೆ ಫೈಥ್ ಫುಲ್ ಮೇ ವೆದರ್ 50 ಸ್ಪರ್ಧೆಗಳನ್ನು ಗೆದ್ದು ಸೋಲಿಲ್ಲದ ಸರದಾರನಾಗಿ ಮೆರೆದಾಡಿ ವೃತ್ತಿ ಬದುಕಿಗೆ 20 ವಿದಾಯ ಹೇಳಿದ್ದಾನೆ. ಆದ್ರೂ ಆಗೊಮ್ಮೆ ಈಗೊಮಮ್ಮೆ ದುಡ್ಡಿಗಾಗಿ ಬಾಂಕ್ಸಿಂಗ್ ರಿಂಗ್ ಗೆ ಧುಮುಕುತ್ತಾನೆ ಫ್ಲೈಡ್ ಮೇ ವೇದರ್.

Floyd Mayweather Lifestyle saakshatv ಫ್ಲೈಡ್ ಮೇ ವೆದರ್ ತಾಯಿ ಡ್ರಗ್ ವ್ಯಸನಿ.. ಆದ್ರೆ ಮಗ ಶ್ರೇಷ್ಠ ಬಾಕ್ಸರ್.. !

ಒಟ್ಟಿನಲ್ಲಿ ದುಡ್ಡು ಹೆಂಗೆಲ್ಲಾ ಆಟವಾಡಿಸುತ್ತೆ ಅನ್ನೋದಕ್ಕೆ ಮೇ ವೆದರ್ ನ ಜೀವನ ಶೈಲಿಯೇ ಉತ್ತಮ ನಿದರ್ಶನ. ಹಾಗಂತ ಮೇ ವೆದರ್ ಹುಟ್ಟು ಶ್ರೀಮಂತನಲ್ಲ. ಬದುಕಿನಲ್ಲಿ ತುಂಬಾನೇ ಕಷ್ಟ, ನೋವುಗಳನ್ನು ಅನುಭವಿಸಿದ್ದಾನೆ.

ಬಾಕ್ಸಿಂಗ್ ರಕ್ತಗತವಾಗಿ ಬಂದ್ರೂ ಮೇ ವೆದರ್ ಆರಂಭದ ದಿನಗಳಲ್ಲಿ ಬಾಕ್ಸಿಂಗ್ ಅನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಂಪಾದನೆಗೆ ಏನೋ ಒಂದು ಉದ್ಯೋಗ ಸಿಕ್ಕಿದ್ರೆ ಸಾಕು ಅನ್ನೋ ಮನೋಭಾವನೆಯಲ್ಲಿದ್ದ ಮೇ ವೆದರ್.

ಆದ್ರೆ ಮೇ ವೆದರ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅಜ್ಜಿ. ಅಜ್ಜಿಯ ಮಾತಿಗೆ ಬೆಲೆಕೊಟ್ಟ ಮೇ ವೆದರ್ ತಂದೆಯ ಅಣತಿಯಂತೆ ಬಾಕ್ಸಿಂಗ್ ರಿಂಗ್ ನಲ್ಲಿ ಅಭ್ಯಾಸ ನಡೆಸಿದ. ಈ ನಡುವೆ ತಾಯಿಯ ಪ್ರೀತಿಯನ್ನು ಮೇ ವೆದರ್ ಕಳೆದುಕೊಂಡ. ಡ್ರಗ್ ವ್ಯಸನಿಯಾಗಿದ್ದ ತಾಯಿ ಮಾರಕ ಕಾಯಿಲೆಯಿಂದ ಇಹ ಲೋಕ ತ್ಯಜಿಸಿದಾಗ ಮೇ ವೆದರ್ ಗೆ ಅಜ್ಜಿಯ ಮಾರ್ಗದರ್ಶನ ಸಿಕ್ಕಿತ್ತು.

Floyd Mayweather Lifestyle saakshatv ಕಷ್ಟದ ದಿನಗಳಲ್ಲಿ ಬೆಳೆದು ಬಂದ ಮೇ ವೆದರ್ ಇವತ್ತು ಈ ಹಂತಕ್ಕೆ ಬೆಳೆದು ನಿಲ್ಲುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ.

ಏನೇ ಆಗ್ಲಿ, ಮೇ ವೆದರ್ ಈ ಜನರೇಷನ್ ನ ಬೆಸ್ಟ್ ಬಾಕ್ಸರ್ ಎಂಬುದರಲ್ಲಿ ಎರಡು ಮಾತಿಲ್ಲ. ಐದು ವಿಭಾಗದಲ್ಲೂ ವಿಶ್ವ ಕಿರೀಟ ಹಾಗೂ 12 ವಿಶ್ವ ಚಾಂಪಿಯಯನ್ ಷಿಪ್ ಗಳನ್ನು ಗೆದ್ದುಕೊಂಡಿರುವ ಮೇ ವೆದರ್ಗೆ ಪ್ರಶಸ್ತಿಗಿಂತ ಹೆಚ್ಚು ದುಡ್ಡೇ ಮುಖ್ಯವಾಗಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ಪ್ರಶಸ್ತಿ ಗೆದ್ದ ಹಣಕ್ಕೆ ತೆರಿಗೆ ಕಟ್ಟಬೇಕು ಅಂತ ಪ್ರಶಸ್ತಿ ಟ್ರೋಫಿಯನ್ನೇ ವಾಪಸ್ ಕೊಟ್ಟಿರುವ ಭೂಪನೂ ಹೌದು.

ಏನೇ ಆದ್ರೂ ಯವ್ವನ, ಜವ್ಚನದಲ್ಲೇ ಸಂಪಾದನೆ ಮಾಡಬೇಕು. ಮಜಾ ಮಾಡಬೇಕು ಅನ್ನೋ ಸ್ವಯಂ ಘೋಷಿತ ಸಿದ್ದಾಂತಕ್ಕೆ ಅಂಟಿಕೊಂಡಿದ್ದ ಮೇ ವೆದರ್ ಹೆಸರು ವಿಶ್ವ ಬಾಕ್ಸಿಂಗ್ ರಂಗದಲ್ಲಿ ಕೊಹಿನೂರು ಡೈಮಂಡ್ ನಂತೆ ಸದಾ ಹೊಳೆಯುತ್ತಿರುತ್ತದೆ.

Tags: boxerFloyd MayweatherFloyd Mayweather lavish lifestylemulti-weight world championSportswolrd boxing
ShareTweetSendShare
Join us on:

Related Posts

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

by Shwetha
December 15, 2025
0

ಹಳಿಯಾಳ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಶಿಕ್ಷಕನೇ, ತನ್ನ ಮಗನ ವ್ಯಾಮೋಹದಲ್ಲಿ ಪರೀಕ್ಷಾ ಅಕ್ರಮಕ್ಕೆ ಇಳಿದು ಸಿಕ್ಕಿಬಿದ್ದಿರುವ ಲಜ್ಜೆಗೆಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಕೇಂದ್ರ...

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

by Shwetha
December 15, 2025
0

ತಿರುವನಂತಪುರಂ: ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ...

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

by Shwetha
December 15, 2025
0

ಶಿವಮೊಗ್ಗ: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿರಂತರ ವಾಗ್ದಾಳಿ ಮತ್ತು ಹೊಂದಾಣಿಕೆ ರಾಜಕಾರಣದ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಆಕ್ರೋಶ...

ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಅಗ್ರಸ್ಥಾನ ಭಾರತದ ಮೂವರು ನಾರಿಯರಿಗೆ ಜಾಗತಿಕ ಮನ್ನಣೆ

ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಅಗ್ರಸ್ಥಾನ ಭಾರತದ ಮೂವರು ನಾರಿಯರಿಗೆ ಜಾಗತಿಕ ಮನ್ನಣೆ

by Shwetha
December 15, 2025
0

ನವದೆಹಲಿ: ಜಗತ್ತಿನ ಪ್ರತಿಷ್ಠಿತ ಫೋರ್ಬ್ಸ್‌ ಮ್ಯಾಗಜಿನ್ ಬಿಡುಗಡೆ ಮಾಡಿರುವ 2025ರ ಸಾಲಿನ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...

ಸರ್ಕಾರಿ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: ರಾಜೀನಾಮೆ ನೀಡಿದರೆ ಪಿಂಚಣಿ ರದ್ದು, ಮಹತ್ವದ ತೀರ್ಪು ಪ್ರಕಟ

ಸರ್ಕಾರಿ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: ರಾಜೀನಾಮೆ ನೀಡಿದರೆ ಪಿಂಚಣಿ ರದ್ದು, ಮಹತ್ವದ ತೀರ್ಪು ಪ್ರಕಟ

by Shwetha
December 15, 2025
0

ನವದೆಹಲಿ: ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಆಘಾತಕಾರಿ ತೀರ್ಪೊಂದನ್ನು ನೀಡಿದೆ. ಸೇವಾವಧಿಯಲ್ಲಿ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವ ಸರ್ಕಾರಿ ನೌಕರರು ಕೇಂದ್ರ ನಾಗರಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram