ಜನರ ಬದುಕಿಗೆ ಮೋದಿ ಕಂಟಕ : ಕೇಂದ್ರದ ವಿರುದ್ಧ ಡಿಕೆಶಿ ಗುಡುಗು
ತುಮಕೂರು : ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಜನರ ಜೇಬಿಗೆ ಮೋದಿ ಕತ್ತರಿ ಹಾಕಿದ್ದು, ಜನ ಸಾಮಾನ್ಯರ ಬದುಕಿಗೆ ನರೇಂದ್ರ ಮೋದಿ ಕಂಟಕವಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ತುಮಕೂರಿನಲ್ಲಿ ಡಿಕೆಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಡಿಕೆಶಿವಕುಮಾರ್, ಬಡ ಜನರ ಬದುಕಿಗೆ ನರೇಂದ್ರ ಮೋದಿ ಕಂಟಕವಾಗಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಸಲಾಗುತ್ತಿದೆ. ಕೇಂದ್ರ ಸರ್ಕಾರ ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದಿದೆ.
ಆದ್ರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಯಾಗುತ್ತಿದ್ದರೂ ಪ್ರಧಾನಮಂತ್ರಿಗಳು ಅದರ ಬಗ್ಗೆ ಯಾವುದೇ ಚಕಾರವೆತ್ತಿಲ್ಲ.
ಈಗ ಪೆಟ್ರೋಲ್-ಡೀಸೆಲ್ ದರ ನೂರರ ಗಡಿ ದಾಟಿದೆ. ಆದರೆ ಪ್ರಧಾನ ಮಂತ್ರಿಗಳು ಜನಸಾಮಾನ್ಯರಿಗೆ ಕೈಗೆಟಕುವ ದರಗಳನ್ನ ಏನಾದರು ಕಡಿಮೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಕಡಿಮೆ ಸಂಬಳ ತೆಗೆದುಕೊಳ್ಳುವ ನೌಕರರಿಗೆ ಸಂಬಳವನ್ನು ಜಾಸ್ತಿ ಮಾಡಿದ್ದಾರೆಯೇ..?
ತೈಲಬೆಲೆ 64 ರೂಪಾಯಿ ಇತ್ತು ಇವತ್ತು ನೂರರ ಗಡಿ ದಾಟಿದೆ ಹಾಗಾದರೆ ಜನಸಾಮಾನ್ಯರು ಪ್ರತಿನಿತ್ಯ ಬದುಕುವುದಾದರೂ ಹೇಗೆ..?
ಯಾಕೆ ಪ್ರಧಾನಮಂತ್ರಿಗಳಿಗೆ ಇದು ಕಾಣುತ್ತಿಲ್ಲವೇ..? ಅವರಿಗೆ ಜನಸಾಮಾನ್ಯರ ಕಷ್ಟ ಅರ್ಥವಾಗುತ್ತಿಲ್ಲ ಎಂದು ನರೇಂದ್ರ ಮೋದಿಯವರ ವಿರುದ್ಧ ಡಿಕೆ ಶಿವಕುಮಾರ್ ಗುಡುಗಿದರು.