ಆಸ್ತಿಗಾಗಿ ಹೆತ್ತವರನ್ನೇ ಕೊಂದ ಪಾಪಿ – ದರೋಡೆ ಎಂದು ಬಿಂಬಿಸಲು ಹೋಗಿ ತಗಲಾಕಿಕೊಂಡ
ಉತ್ತರಪ್ರದೇಶ : ಆಸ್ತಿಗಾಗಿ ಹೆತ್ತ ತಂದೆ ತಾಯಿಯನ್ನೇ ಪಾಪಿ ಪುತ್ರನೊಬ್ಬ ಕೊಲೆ ಮಾಡಿ ಅದನ್ನ ದರೋಡೆ ಎಂಬ ರೀತಿಯಲ್ಲಿ ಬಿಂಬಿಸಲು ಪ್ರಯತ್ನ ಮಾಡಿ ಕಡೆಗೂ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದ ಕಾರಣಕ್ಕೆ ರವಿ ಢಾಕ ಎಂಬಾತ ತನ್ನ ತಂದೆ ಸುರೇಂದ್ರ ಢಾಕ(70 ) ಮತ್ತು ತಾಯಿ ಸಂತೋಷ್(63) ಎಂಬುವವರನ್ನು ಕತ್ತು ಹಿಸುಕಿ ಕೊಲೆಮಾಡಿದ್ದಾನೆ.
ವೃದ್ಧ ದಂಪತಿಯು ತಮ್ಮ ಹಿರಿಯ ಮಗ ಗೌರವ್ ಜೊತೆ ಘಾಜಿಯಾಬಾದ್ ನ ಲೋನಿ ಎಂಬಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆ ಗೌರವ್ ಮೃತಪಟ್ಟಿದ್ದ. ನಂತರ ಆಸ್ತಿಯನ್ನೆಲ್ಲ ಆತನ ಹೆಂಡತಿ ಹೆಸರಿಗೆ ಬರೆಯಬೇಕೆಂದು ನಿರ್ಧರಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರವಿ ತಂದೆ ತಾಯಿ ಕೊಲೆಗೆ ಸ್ಕೆಚ್ ಹಾಕಿದ್ದ.
ಜೂನ್ 11 ರಂದು ತನ್ನ ಅತ್ತಿಗೆ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ , ಮನೆಗೆ ನುಗ್ಗಿರುವ ರವಿ ತಂದೆಯನ್ನು ನೆಲಮಹಡಿಯಲ್ಲಿ ವೈರ್ ನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಮೇಲ್ಮಹಡಿಯಲ್ಲಿದ್ದ ತಾಯಿಯನ್ನು ಬಟ್ಟೆಯಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಅದನ್ನ ದರೋಡೆ ರೀತಿ ನಂಬಿಸಲು ನಂಬಿಸಲು ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ತನ್ನ ಸ್ನೇಹಿತರೊಂದಿಗೆ ಇಸ್ಪೀಟು ಆಡಲು ತೆರಳಿದ್ದಾನೆ ಎನ್ನಲಾಗಿದೆ.
ಸಾಲದಕ್ಕೆ ಸಂಜೆ ಮನೆಗೆ ವಾಪಸ್ ಆಗಿ ಆಘಾತಗೊಂಡಿರುವಂತೆ ನಟಿಸಿದ್ದಾನೆ.. ಪೊಲೀಸರಿಗೆ ಕರೆ ಮಾಡಿ ದರೋಡೆ ನಡೆದಿದೆ ಎಂದು ನಂಬಿಸುವ ಪ್ರಯತ್ನ ಮಾಡಿದ್ದಾನೆ.. ಆದ್ರೆ ಆತನ ಹಾವ ಭಾವ ೆಲ್ಲವನ್ನೂ ಗಮನಿಸಿದ ಪೊಲೀಸರು ಆತನ ಮೇಲೆ ಅನುಮಾನ ಬಂದು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








