ADVERTISEMENT
Wednesday, February 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಕೊರೊನಾ ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳ ಕುರಿತು ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ

admin by admin
June 16, 2021
in Health, Newsbeat, ಆರೋಗ್ಯ
dr c. r. chandrashekar saakshatv bengaluru
Share on FacebookShare on TwitterShare on WhatsappShare on Telegram

ಕೊರೊನಾ ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳ ಕುರಿತು ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ
dr c.r. chandrasheakar saakshatv bengaluru ಬೆಂಗಳೂರು: ವೇದ ಕಾಲದಿಂದ ಪ್ರಸನ್ನ ಕಾಯ, ಪ್ರಸನ್ನ ಮನಸು, ಪ್ರಸನ್ನ ಇಂದ್ರಿಯ, ಪ್ರಸನ್ನ ಪಂಚೇಂದ್ರಿಯಗಳು, ಪ್ರಸನ್ನ ಆತ್ಮ ಇರಬೇಕು ಎಂಬ ಮಾತಿದೆ. ಇಹ, ಭೋಗಭಾಗ್ಯದ ಚಿಂತನೆಗಳಿಗಿಂತ ಹೊರತಾಗಿರುವುದು ಆರೋಗ್ಯವಂತರ ಲಕ್ಷಣ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೊರೊನಾ: ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳು” ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತಾಡಿದ ಅವರು, ಐಹಿಕ ಸುಖಕ್ಕೆ ಬೇಕಾದವುಗಳನ್ನೆಲ್ಲ ಪಡೆಯುತ್ತಿದ್ದೇವೆ. ಆದರೆ, ಸುಖ ಕ್ಷೀಣಿಸುತ್ತಿದೆ. ಐಹಿಕ ಸುಖಭೋಗಗಳತ್ತ ಗಮನಕೊಟ್ಟಿರುವ ಜನ ಆರೋಗ್ಯವನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ಕೊರೊನಾ ಮಾತ್ರವಲ್ಲ ಇನ್ನಿತರ ಕಾಯಿಲೆಗಳು ಕಾಡುತ್ತಿವೆ ಎಂದರು.
covid 19 saakshatv bengaluru ದೇಶದ ಜನ ಬಹುತೇಕ ರೋಗಗಳಿಂದ ನರಳುತ್ತಿದ್ದಾರೆ. ಇದರಿಂದ ವೈದ್ಯರ ಅಪಾಯಿಂಟ್ ಮೆಂಟ್ ಪಡೆಯಲು 3 ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದ್ದೇವೆ. ಕರ್ನಾಟದ ಬಜೆಟ್, ದೇಶದ ಬಜೆಟ್ ನಲ್ಲಿ ಶೇ. 2ಕ್ಕಿಂತ ಕಡಿಮೆ ಆದಾಯವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ವಿನಿಯೋಗಿಸುತತ್ತಿದ್ದೇವೆ. ಖಾಸಗಿಯವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ನಮಗೆ ಶಾಲೆ, ಆಸ್ಪತ್ರೆಗಳನ್ನು ನಡೆಸಲಾಗುವುದಿಲ್ಲ ಎಂದು ಬಿಟ್ಟುಕೊಟ್ಟಿದ್ದೇವೆ. ಇದು ಒಳ್ಳೆಯ ಲಕ್ಷಣವಲ್ಲ. ಖಾಸಗಿಯವರು ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೆ ನಮ್ಮ ಆರೋಗ್ಯ, ಶಿಕ್ಷಣದ ಕುರಿತು ಕಾಳಜಿ ಇರುವುದಿಲ್ಲ. ಆದ್ದರಿಂದ ಇವೆರೆಡೂ ಕ್ಷೇತ್ರ ದುಬಾರಿಯಾಗಿವೆ.  ಕೋವಿಡ್ ವ್ಯಾಕ್ಸಿನ್ ಗೆ 1.5 ಸಾವಿರದವರೆಗೆ ನೀಡಬೇಕಿದೆ ಎಂದರು.
covid 19 saakshatv bengaluru ಕೋವಿಡ್ ಜಾಗತಿಕ ರೋಗ. ಬಂದು ಒಂದೂವರೆ ವರ್ಷವಾಯಿತು. ಇನ್ನೂ ಎಷ್ಟು ದಿವಸ ಇರುತ್ತದೆ, ಎಷ್ಟು ಅಲೆ ಬರುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲಲ್ಲ. ಕೊರೊನಾ ವೈರಸ್ ನಮ್ಮೊಂದಿಗೆ ಇರಲು ಬಂದಿದೆ. ಹೋಗಲು ಬಂದಿಲ್ಲ. ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಅದರಿಂದ ಮುಕ್ತವಾವಾಗಬಹುದು ಎಂದರು.
ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ನಮಗೆ ಸ್ವಾತಂತ್ರ್ಯವಿಲ್ಲ. ಮಕ್ಕಳೂ ಸೇರಿದಂತೆ ಗೃಹಬಂಧನದಲ್ಲಿದ್ದೇವೆ. ನಿನ್ನೆವರೆಗೂ ಜನ ಮನೆಯಲ್ಲಿರಿ ಎಂದು ಸರ್ಕಾರ ಹೇಳಿತ್ತು. ಇದ್ದೆವು. ಯಾವುದೇ ಪ್ರಾಣಿ ಸ್ವಚ್ಛಂದವಾಗಿ ಇರಲು ಅಪೇಕ್ಷಿಸುತ್ತದೆ. ಆದರೆ, ಕೊರೊನಾ ಕಾರಣದಿಂದಾಗಿ ಯಾವುದೇ ಸಾಮಾಜಿಕ ಚಟುವಟಿಕೆ ಇಲ್ಲ. ಮದುವೆ, ನಾಮಕರಣವಿಲ್ಲ. ಬೇರೆಯವರ ಮನೆಗಳಿಗೆ ಹೋಗುವಂತಿಲ್ಲ. ಒಟ್ಟಿಗೆ ಸೇರಿ ಸಂತೋಷಪಡುವಂತಿಲ್ಲ. ಬಹಳ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದರು.

ಕೆಲವರು ಕೊರೊನಾ ಪಾಸಿಟಿವ್ ಬಂದರೆ ಬಚ್ಚಿಟ್ಟುಕೊಳ್ಳುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ನೆಗೆಟಿವ್ ಥಿಂಕಿಂಗ್ ಜಾಸ್ತಿಯಾಗಿದೆ. ಹತ್ತು ಕಂತುಗಳಲ್ಲಿ ಈ ವೆಬಿನಾರ್ ಮೂಲಕ ಜನಸಾಮಾನ್ಯರಿಗೆ ಸರಿಯಾದ ವಿಷಯವನ್ನು ತಜ್ಞರಿಂದ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಧೈರ್ಯಂ ಸರ್ವತ್ರ ಸಾಧನಂ. ನೀವು ಧೈರ್ಯದಿಂದ ಇದ್ದರೆ ಹುಲಿಯನ್ನೂ ಹೆದರಿಸುತ್ತೀರಿ, ಹೆದರಿದರೆ ಇಲಿಗೂ ನೀವು ಹೆದರುತ್ತೀರಿ. ಕೊರೊನಾ ಈಗ ಹುಲಿಯಂತೆ ಬಂದಿದೆ. ನೀವು ಅದರ ವಿರುದ್ಧ ಹೋರಾಡಬೇಕು. ಪಾಸಿಟಿವ್ ಬಂದರೆ ಹೆದರಬೇಡಿ. ಬಂದವರಿಗೆ ಕೂಡ ನೀವು ಧೈರ್ಯ ಹೇಳಿ. ನೆಗೆಟಿವ್ ಚಿಂತನೆಯನ್ನು ಬಿಡೋಣ ಎಂದರು.

Related posts

If you want lucky money to come to you, write this mantra on a white sheet of paper and keep it with you.

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

February 10, 2026
Remembering Sri Subramanya Swamy, today's accurate horoscope, you will get immense success and property benefits. 5 zodiac signs

ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು

February 10, 2026

ಕೊರೊನಾ ಮೊದಲ ಅಲೆಯಲ್ಲಿ ಶುಗರ್, ಬಿಪಿ, ಅಸ್ತಮಾ, ಹೃದ್ರೋಗಿಗಳು ಬಲಿಯಾದರು. ಯಾವುದೇ ರೋಗವಿದ್ದವರು ಮೊದಲು ವ್ಯಾಕ್ಸಿನ್ ತೆಗೆದುಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಖಿನ್ನತೆಯ ಪ್ರಮಾಣ 10ರಷ್ಟು ಇದ್ದದ್ದು 30ಕ್ಕೆ ಏರಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಸಂಬಳ ಕಡಿತ ಇತ್ಯಾದಿಗಳಿಂದ ನಿರಾಶೆಗಳಿಗೆ ಒಳಗಾಗಿದ್ದಾರೆ   ಎಂದರು.

ಖಿನ್ನತೆ ಬಂದರೆ ವೈದ್ಯರನ್ನು ಸಂಪರ್ಕಿಸಿ. ಶಮನಕಾರಿ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಮಾನಸಿಕ ರೋಗಕ್ಕೆ ಔಷಧ ತೆಗೆದುಕೊಂಡುವರು ಅಡಿಕ್ಟ್ ಆಗುತ್ತಾರೆ ಎಂಬ ತಪ್ಪುಕಲ್ಪನೆ ಇದೆ. ಇದು ಸರಿಯಲ್ಲ. ಬೆಳಗಾವಿ, ಕಲಬುರ್ಗಿ ಮೊದಲಾದ ಎಲ್ಲ ಜಿಲ್ಲೆಗಳಲ್ಲಿ ಈಗ ಮನೋವೈದ್ಯರಿದ್ದಾರೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲೂ ವ್ಯವಸ್ಥೆಯಾಗಿದೆ. ಸಾಮಾನ್ಯ ವೈದ್ಯರೂ ಕೂಡ ಚಿಕಿತ್ಸೆ ಕೊಡುತ್ತಾರೆ ಎಂದರು.
ಕೊರೊನಾ ಸೇರಿದಂತೆ ಇನ್ನಿತರ ರೋಗಗಳನ್ನು ಆಹಾರ ಕ್ರಮದಿಂದ ಸೋಲಿಸಬಹುದು. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ತಿನ್ನಿ. ಹಣ್ಣು, ತಕಾರಿಗಳನ್ನು ಹೆಚ್ಚು ತಿನ್ನಿ. ಇರುವುದರಲ್ಲೇ ಇದು ಆರೋಗ್ಯಕರ. ಕರಿದ ಪದಾರ್ಥ, ಸಿಹಿ, ಮಾಂಸಾಹಾರ ಪದಾರ್ಥಗಳನ್ನು ಕಡಿಮೆ ತಿನ್ನಿ. ಜಂಕ್ ಫುಡ್ ಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಮಕ್ಕಳಿಗೆ ಹೊಟ್ಟೆ, ಕಿಡ್ನಿ, ಲಿವರ್ ಕೆಡುತ್ತದೆ ಎಂದು ಹೇಳಿ ಎಂದರು.
ಪ್ರಸನ್ನ ಕಾಯ, ಮನಸು ಬೇಕೆಂದರೆ 10:30ಕ್ಕೆ ಮಲಗಿ, 6 ಗಂಟೆಗೆ ಎದ್ದೇಳಿ. ಕೊರೊನಾ ಸ್ವಚ್ಛತೆಯ ಪಾಠ ಕಲಿಸಿದೆ. ಒಳ್ಳೆಯ ಗಾಳಿ, ಬೆಳಕು ಇದ್ದರೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಬರುವುದಿಲ್ಲ. ಸಮಯ, ಶಿಸ್ತು ಪಾಲಿಸಿ. ಷರತ್ತಿಲ್ಲದ ಪ್ರೀತಿ ಮತ್ತು ವಿಶ್ವಾಸ ಸ್ನೇಹ ಇರಲಿ. ಒಳ್ಳೆ ಮಾತು, ನಡವಳಿಕೆ ರೂಢಿಸಿಕೊಳ್ಳಿ. ನಮ್ಮವರ ಕುರಿತು ಮೆಚ್ಚುಗೆ, ಶ್ಲಾಘನೆ ಬಹಿರಂಗವಾಗಿ ಮಾಡಿ. ಟೀಕೆ, ತಿರಸ್ಕಾರವನ್ನು ಬಹಿರಂಗವಾಗಿ ಮಾಡಬೇಡಿ.
ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ, ನಮ್ಮಲ್ಲಿ ಎಲ್ಲೋ ಅವಿತುಕೊಂಡಿದ್ದ ಖಿನ್ನತೆಯನ್ನು ಡಾ.ಸಿ.ಆರ್.ಚಂದ್ರಶೇಖರ್ ಇಲ್ಲವಾಗಿಸಿದರು. ಇದಕ್ಕಾಗಿ ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳು ಎಂದರು.
loans for covid treatment ನಾವು ಹೋಮ್ ಐಸೋಲೇಷನ್ ಕುರಿತು ಜಾಗೃತಿ ಮೂಡಿಸುವಲ್ಲಿ ಸೊತದ್ದು ಕಾಯಿಲೆ ಹೆಚ್ಚಿಸಲು ಕಾರಣವಾಯಿತು. ನಾನು ಕೂಡ ಕೊರೊನಾ ಪೀಡಿತೆ. ಸ್ಯಾಚ್ಯುರೇಷನ್ 86, 87 ಇತ್ತು. ಯಾರಿಗೂ ಹೇಳಲಿಲ್ಲ. ಅನಗತ್ಯವಾದ ಭಯ ಸೃಷ್ಟಿಸಿಕೊಳ್ಳದೆ, ಅದರಿಂದ ಹೊರಬರಬೇಕು. ನಾನು ಹೋಮ್ ಐಸೋಲೇಷನ್ ನಲ್ಲಿದ್ದೆ. ನನ್ನ ಮನೆಯವರು ನೋಡಿಕೊಂಡದ್ದು ತುಂಬಾ ಮಹತ್ವದ್ದು. ಎಲ್ಲ ಕಾಲದಲ್ಲೂ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಬದುಕಿನೊಳಗ ಬಾಳೋದು ಬಾಳ ಕಷ್ಟ ಎಂಬ ಬೇಂದ್ರೆಯವರ ಮಾತಿನಂತೆ ಇರಬೇಕು ಎನ್ನುತ್ತಾರೆ  ಡಾ. ಎಂ.ಎಸ್.ಆಶಾದೇವಿ,
ಕಾರ್ಯಕ್ರಮವನ್ನು ನಿರ್ವಹಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ, ಜನಜಾಗೃತಿಯ ಭಾಗವಾಗಿ ಆರೋಗ್ಯ ಬಂಧುತ್ವ ವೆಬಿನಾರ್ ಆಯೋಜಿಸಿದೆ ಎಂದರು. ಜೊತೆಗೆ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಎಲ್ಲರನ್ನು ಸ್ವಾಗತಿಸಿದರು. ಪ್ರಶ್ನೋತ್ತರದಲ್ಲಿ ಡಾ. ಗಿರೀಶ್ ಮೂಡ್ ಮತ್ತು ಡಾ.ಸಿ.ಆರ್.ಚಂದ್ರಶೇಖರ್ ಉತ್ತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಈ ನೆಲ ಈ ಜಲ ಈ ಮಣ್ಣು ನಮ್ಮದು ರಕ್ಷಿಸುವ ಹೊಣೆಗಾರಿಕೆ ನೀವೇ ಹೇಳಿ ಯಾರದು ಮತ್ತು ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇಕಟ್ಟೇ ಕಟ್ಟುತ್ತೇವ ಗೀತೆಗಳನ್ನು ಫಕೀರ್ ಹುಲಿಕೊಟ್ಟಲ್ ಹಾಡಿದರು.

Tags: #saakshatvbengaluruCovid19covidindiacovidkarnatakaDr C.R Chandrasekhar
ShareTweetSendShare
Join us on:

Related Posts

If you want lucky money to come to you, write this mantra on a white sheet of paper and keep it with you.

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

by admin
February 10, 2026
0

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

Remembering Sri Subramanya Swamy, today's accurate horoscope, you will get immense success and property benefits. 5 zodiac signs

ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು

by admin
February 10, 2026
0

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ...

RSSನ ನಿರಂತರ ಶ್ರಮದಿಂದಲೇ ಬಿಜೆಪಿ ಬೆಳೆದಿದೆ – ಮೋಹನ್ ಭಾಗವತ್

RSSನ ನಿರಂತರ ಶ್ರಮದಿಂದಲೇ ಬಿಜೆಪಿ ಬೆಳೆದಿದೆ – ಮೋಹನ್ ಭಾಗವತ್

by Shwetha
February 10, 2026
0

ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬರಲು ಮತ್ತು ‘ಅಚ್ಛೇ ದಿನ್’ ಎಂಬ ಮಾತು ಸಾಕಾರಗೊಳ್ಳಲು ದಶಕಗಳಿಂದ RSS ಕಾರ್ಯಕರ್ತರು ನಡೆಸಿದ ನಿರಂತರ ಪರಿಶ್ರಮ ಮತ್ತು ಸೈದ್ಧಾಂತಿಕ...

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ರಾಜ್ಯ ರಾಜಕಾರಣ: HD ಕುಮಾರಸ್ವಾಮಿ ಮಹತ್ವದ ಹೇಳಿಕೆ, ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು

by Shwetha
February 10, 2026
0

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಸಮಯ ಬಂದಾಗ ತಾನು ರಾಜ್ಯ ರಾಜಕೀಯಕ್ಕೆ...

ಬ್ಯಾಂಕ್ ಖಾತೆಗೆ ಕನ್ನ ಬೀಳುವ ಮುನ್ನ ಎಚ್ಚರ !  ಆಂಡ್ರಾಯ್ಡ್ ಫೋನ್ ಬಳಸುವವರೇ  100 ಕೋಟಿ ಫೋನ್‌ಗಳು ಇನ್ನು ಡೇಂಜರ್ ಝೋನ್‌ನಲ್ಲಿ ನಿಮ್ಮ ಮೊಬೈಲ್ ಸೇಫ್ ಆಗಿದೆಯೇ ಕೂಡಲೇ ತಿಳಿದುಕೊಳ್ಳಿ

ಬ್ಯಾಂಕ್ ಖಾತೆಗೆ ಕನ್ನ ಬೀಳುವ ಮುನ್ನ ಎಚ್ಚರ ! ಆಂಡ್ರಾಯ್ಡ್ ಫೋನ್ ಬಳಸುವವರೇ 100 ಕೋಟಿ ಫೋನ್‌ಗಳು ಇನ್ನು ಡೇಂಜರ್ ಝೋನ್‌ನಲ್ಲಿ ನಿಮ್ಮ ಮೊಬೈಲ್ ಸೇಫ್ ಆಗಿದೆಯೇ ಕೂಡಲೇ ತಿಳಿದುಕೊಳ್ಳಿ

by Shwetha
February 10, 2026
0

ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಗೂಗಲ್ ಮಹತ್ವದ ಮತ್ತು ಆಘಾತಕಾರಿ ಮಾಹಿತಿಯೊಂದನ್ನು ನೀಡಿದೆ. ನೀವೇನಾದರೂ 2021 ಅಥವಾ ಅದಕ್ಕಿಂತ ಹಳೆಯ ಮಾಡೆಲ್‌ನ ಸ್ಮಾರ್ಟ್‌ಫೋನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram