ಕೆಆರ್‍ಎಸ್ krs ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ
ಮಂಡ್ಯ : ಕೆಆರ್ ಎಸ್ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವ ಕಾರಣ ಕೆಆರ್‍ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯಕ್ಕೆ ಇಂದು 6,379 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ನಿನ್ನೆ ಡ್ಯಾಂಗೆ 1,228 ಕ್ಯೂಸೆಕ್ ಒಳಹರಿವು ಬಂದಿತ್ತು. ಒಂದು ದಿನ ಅಂತರದಲ್ಲಿ 5,151 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ.
ಸದ್ಯ ಅಣೆಕಟ್ಟೆಯ ನೀರಿನ ಮಟ್ಟ 82.50 ಅಡಿ ಇದ್ದು, ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ ಇದೆ.
ಒಳಹರಿವು 6,379 ಕ್ಯೂಸೆಕ್ ಇದ್ದು ಹೊರಹರಿವು 361 ಕ್ಯೂಸೆಕ್ ಇದೆ. ಇನ್ನೂ ಸದ್ಯ ಡ್ಯಾಂನ ನೀರಿನ ಸಂಗ್ರಹ 12.146 ಟಿಎಂಸಿ ಇದೆ.










