ವಿದೇಶಕ್ಕೆ ಹಾರಲು , ಪಾಸ್ ಪೋರ್ಟ್ ನವೀಕರಣಕ್ಕೆ ಕಂಗನಾ ಒದ್ದಾಟ – ಹೈಕೋರ್ಟ್ ಮೊರೆ
ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಗೆ ಕೋರ್ಟ್ ಕಚೇರಿ ಮೂಮೂಲಿ ವಿಚಾರ.. ಒಂದಲ್ಲಾ ಒಂದು ವಿಚಾರವಾಗಿ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾ , ಅನೇಕ ಕೆಸ್ ಗಳಲ್ಲಿ ಕೋರ್ಟ್ ಕಚೇರಿ ಅಂತ ಅಲೆಯುತ್ತಿರುತ್ತಾರೆ.. ಅಂತೆಯೇ ಈ ಬಾರಿಯೂ ಹೈ ಕೋರ್ಟ್ ಮೊರೆ ಹೋಗಿದ್ದಾರೆ.
ಆದ್ರೆ ಈ ಬಾರಿ ಕಂಗನಾ ತಮ್ಮ ಪಾಸ್ ಪೋರ್ಟ್ ನವೀಕರಣಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.. ತನ್ನ ಪಾರ್ಟ್ ಪೋರ್ಟ್ ನವೀಕರಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್, ಅರ್ಜಿ ಅಸ್ಪಷ್ಟವಾಗಿದೆ ಮತ್ತು ಎಲ್ಲಾ ದಾಖಲೆಗಳು ಸೂಕ್ತವಾಗಿಲ್ಲ ಎಂದು ಹೇಳಿದೆ. ಜೂನ್ 25ಕ್ಕೆ ವಿಚಾರಣೆ ಮುಂದೂಲಾಗಿದೆ.
ಸದ್ಯ ಕಂಗನಾ ದಾಖಡ್ ಸಿನಿಮಾದ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳುವ ಅವಶ್ಯಕತೆಯಿದೆ.. ಆದ್ರೆ ಸೆಪ್ಟಂಬರ್ 15ಕ್ಕೆ ಕಂಗನಾ ಪಾಸ್ ಪೋರ್ಟ್ ಅವಧಿ ಮುಕ್ತಾಯವಾಗಲಿದೆ. ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದರಿಂದ ಪಾಸ್ ಪೋರ್ಟ್ ನವೀಕರಿಸಲು ಸಲ್ಲಿಸಿದ್ದ ಅರ್ಜಿಯನ್ನು ಪಾಸ್ ಪೋರ್ಟ್ ಪ್ರಾಧಿಕಾರ ತಿರಸ್ಕರಿಸಿದೆ. ಹಾಗಾಗಿ ಕಂಗನಾ ಕೋರ್ಟ್ ಮೊರೆಹೋಗಿದ್ದಾರೆ.
ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ,’ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ಈ ವರ್ಷದ ಆರಂಭದಲ್ಲಿ ಬಾಂದ್ರಾ ಪೊಲೀಸರು ಎಫ್ ಐ ಆರ್ ದಾಖಲಿಸಿದ ಕಾರಣ ಪಾಸ್ ಪೋರ್ಟ್ ನವೀಕರಿಸಲು ನಿರಾಕರಿಸಿದ್ದಾರೆ’ ಎಂದು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








