ಹೆಚ್.ವಿಶ್ವನಾಥ್ ಒಬ್ಬ ಹುಚ್ಚ : ಎಸ್.ಆರ್.ವಿಶ್ವನಾಥ್ ವಾಗ್ದಾಳಿ
ಬೆಂಗಳೂರು : ಹೆಚ್.ವಿಶ್ವನಾಥ್ ಒಬ್ಬ ಹುಚ್ಚ,ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ಎರಡು ಬಗೆಯುವ ಬುದ್ದಿ ಅವರದ್ದು ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ವಿರುದ್ಧ ಶಾಸಕ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರು ಸಿಎಂ ಸ್ಥಾನದಿಂದ ಕೆಳಗಿಳಿಯೋದು ಸೂಕ್ತ ಎಂಬ ಹೆಚ್ ವಿಶ್ವನಾಥ್ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಎಸ್.ಆರ್.ವಿಶ್ವನಾಥ್, ಅವರು ಏನು ಮಾತಾಡುತ್ತಿದ್ದಾರೆ ಎಂಬುದರ ಬಗ್ಗೆ ಅವರಿಗೆ ಗೊತ್ತಿಲ್ಲ.
ಯಡಿಯೂರಪ್ಪನವರಿಗೆ ವಯಸ್ಸಾಗಿರಬಹುದು ಆದರೆ ಅವರ ಮಾನಸಿಕ ನಿರ್ಧಾರ ಗಳು ಧೃಡವಾಗಿವೆ. ಹೆಚ್.ವಿಶ್ವನಾಥ್ ಒಬ್ಬ ಹುಚ್ಚ.
ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ಎರಡು ಬಗೆಯುವ ಬುದ್ದಿ ಅವರದ್ದು, ರಸ್ತೆಯಲ್ಲಿ ಅರೆ ಹುಚ್ಚರ ರೀತಿ ಓಡಾಡುವವರ ರೀತಿ ವಿಶ್ವನಾಥ್ ಆಗಿದ್ದಾರೆ.
ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ, ತಪಾಸಣೆ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ವ್ಯಂಗ್ಯವಾಡಿದರು.
ಇನ್ನು ಬಿಜೆಪಿಗೆ ಒಬ್ಬರೇ ವಿಶ್ವನಾಥ್ ಸಾಕಾಗಿತ್ತು, ಆದರೇನು ಮಾಡುವುದು, ಬೇರೆಯವರ ಜೊತೆ ಬಂದಾಗ ಬೇಡ ಎನ್ನಲಾಗುವುದಿಲ್ಲ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ತಪ್ಪಾಗಿದೆ ಎಂದು ಟೀಕೆ ಮಾಡಿದರು.