ಹೊಡೀರಿ ಚೆಪ್ಪಾಳೆ | ಕೊನೆಗೂ ಬೆಂಗಳೂರಲ್ಲಿ ಸೆಂಚೂರಿ ಬಾರ್ಸೇ ಬಿಡ್ತು ಪೆಟ್ರೋಲ್
ಬೆಂಗಳೂರು : ಅಂತು ಇಂತು ಮೆಲ್ಲಮೆಲ್ಲಗೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪೆಟ್ರೋಲ್ ಸೆಂಚೂರಿ ಬಾರಿಸಿದೆ.
ಇಂದು ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು ಸೆಂಚುರಿ ಬಾರಿಸಿದೆ. ಈ ಮೂಲಕ 1 ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ತಲುಪಿದೆ.
ದೇಶದಾದ್ಯಂತ ಇಂದು ಪೆಟ್ರೋಲ್ ಬೆಲೆ 28 ಪೈಸೆ ಡಿಸೇಲ್ ದರ 44 ಪೈಸೆ ಏರಿಕೆ ಕಂಡಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ 1 ಲೀಟರ್ ಗೆ 100.23 ರೂ ಆಗಿದೆ. ಡಿಸೇಲ್ ದರ ಲೀಟರ್ ಗೆ 93.02 ರೂಪಾಯಿ ತಲುಪಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.93 ರೂಪಾಯಿ. ಡಿಸೇಲ್ ಲೀಟರ್ ಗೆ 87.69 ರೂಪಾಯಿ ಆಗಿದೆ.
ಬೆಂಗಳೂರನಲ್ಲಿ ನಿನ್ನೆ ಪೆಟ್ರೋಲ್ ಲೀಟರ್ ಗೆ 99.95 ರೂಪಾಯಿ ಮತ್ತು ಡಿಸೇಲ್ ಲೀಟರ್ ಗೆ 92.38 ರೂಪಾಯಿ ಆಗಿತ್ತು.










