ಹನಿಮೂನ್ ನಲ್ಲಿ ತಾನು ತೃತೀಯ ಲಿಂಗೀಯ ಎಂದ ಪತಿ – ಪತ್ನಿ ಮಾಡಿದ್ದೇನು ಗೊತ್ತಾ..?
ಲಂಡನ್ : ನವದಂಪತಿಯೊಂದು ಮದುವೆಯಾದ ಬಳಿಕ ಹನಿಮೂನ್ ಗಾಗಿ ತೆರಳಿದ್ದರು.. ಈ ವೇಳೆ ಪತಿ ತನಗೆ ಮಹಿಳೆಯರಂತೆ ಬದುಕಲು ಇಷ್ಟ , ತೃತೀಯ ಲಿಂಗೀಯನಾಗಿ ಪರಿವರ್ತನೆಯಾಗಬೇಕೆಂಬ ಆಸೆಯನ್ನ ಹೊರಹಾಕಿದ್ದಾನೆ.. ಆದ್ರೆ ಪತಿಯ ಮೇಲೆ ಕೋಪ ಮಾಡಿಕೊಳ್ಳುವ ಬದಲು ಆತನ ಪತ್ನಿ ಆತನ ಆಸೆಗೆ ತಕ್ಕಂತೆ ಬದುಕಲು ನೆರವಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬ್ರಿಟನ್ ಮೂಲದ ಗ್ರಾಫಿಕ್ ಡಿಸೈನರ್ ಜೆಕ್ ಮತ್ತು ಅಮೆರಿಕದ ಹಾರ್ವಿ ಆನ್ ಲೈನ್ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಹನಿಮೂನ್ ಗಾಗಿ ಐಲ್ಯಾಂಡ್ ಗೆ ತೆರಳಿದ್ದರು. ಈ ವೇಳೆ ಹಾರ್ವಿಗೆ ತನ್ನ ಪತಿ ಪುರುಷನಲ್ಲ ಅನ್ನೋ ರಹಸ್ಯ ತಿಳಿದಿದೆ. ಪತಿ ಸಹ ತಾನು ಮಹಿಳೆಯಂತೆ ಇರಲು ಇಷ್ಟಪಡೋದಾಗಿ ಪತ್ನಿ ಮುಂದೆ ಹೇಳಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಲೇ ಹಾರ್ವಿ ಪತಿಯನ್ನು ನಿಂದಿಸದೇ ಆತನಿಗೆ ಅವನ ಇಷ್ಟದಂತೆ ಇರಲು ಅನುಮತಿ ನೀಡಿದ್ದಾರೆ.
ಜೆಕ್, ತನ್ನಲ್ಲಾಗುವ ಬದಲಾವಣೆಗಳನ್ನು ಹಾರ್ವಿ ಜೊತೆ ಹಂಚಿಕೊಂಡಿದ್ದಾನೆ. ತಾನು ಟ್ರಾನ್ಸ್ಜೆಂಡರ್ ಆಗಿ ಬದಲಾಗುವ ಇಚ್ಛೆಯನ್ನ ಸಹ ವ್ಯಕ್ತಪಡಿಸಿದ್ದಾನೆ. ಇದನ್ನ ಬೆಂಬಲಿಸಿದ ಹಾರ್ವಿ ತನ್ನ ಉಳಿತಾಯದ ಹಣದಿಂದ 45 ಸಾವಿರ ಪೌಂಡ್ ರೂಪಾಯಿಯಿಂದ ಪತಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇಷ್ಟು ಮಾತ್ರ ಅಲ್ಲದೇ ಪತಿಗೆ ಮೇಕಪ್ ಮಾಡೋದು, ಹುಡುಗಿಯರಂತೆ ಡ್ರೆಸ್ ತೊಡಿಸಿ ಹಾರ್ವಿ ಖುಷಿ ಪಡ್ತಾರೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಹಾರ್ವಿ ಮತ್ತು ಜೆಕ್ ಮತ್ತೊಮ್ಮೆ ಮದುವೆಯಾಗಲು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಜೆಕ್ ತನ್ನ ಹೆಸರನ್ನ ರಾಯನಾ ಅಂತ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ..








