ಮನೆಯಿಂದ ಹೊರಬರಲು ಸಾಧ್ಯವಾಗದ ಜನರಿಗೆ ಮನೆ ಮನೆಗೆ ತೆರಳಿ ಲಸಿಕೆ – ಜಿಲ್ಲಾಧಿಕಾರಿ ಡಾ.ರಾಜೇಂದ್ರ
ಜೂನ್ 18 ಶುಕ್ರವಾರದಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಅಂಗವಿಕಲರು, ವೃದ್ಧರು ಮತ್ತು ಮನೆಯಿಂದ ಹೊರಬರಲು ಸಾಧ್ಯವಾಗದ ಜನರಿಗೆ ಉಚಿತ ಲಸಿಕೆಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಇಂಡಿಯನ್ ರೆಡ್ ಕ್ರಾಸ್, ರೋಟರಿ ಕ್ಲಬ್ ಮಂಗಳೂರು, ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಅಂಗವಿಕಲರು, ವೃದ್ಧರು ಮತ್ತು ಮನೆಯಿಂದ ಹೊರಬರಲು ಸಾಧ್ಯವಾಗದ ಜನರಿಗೆ ಲಸಿಕೆ ಹಾಕುತ್ತಾರೆ. ಇದಕ್ಕಾಗಿ ತಮ್ಮ ಹೆಸರನ್ನು dk.nic.in ನಲ್ಲಿ ನೋಂದಾಯಿಸುವಂತೆ ಜಿಲ್ಲಾಡಳಿತ ಸಾರ್ವಜನಿಕರನ್ನು ಕೋರಿದೆ.
ಈ ಉದ್ದೇಶಕ್ಕಾಗಿ ಜೂನ್ 19 ರ ಶನಿವಾರ ಬೆಳಿಗ್ಗೆ 9.30 ಕ್ಕೆ
ಹಂಪನ್ ಕಟ್ಟೆಯ ವಿಶ್ವವಿದ್ಯಾಲಯದ ಆವರಣದಲ್ಲಿ ವಾಹನವನ್ನು ಪ್ರಾರಂಭಿಸಲಾಗುವುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊತ್ತಂಬರಿ ರಸ ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳು#corianderjuice #saakshatv #healthtips https://t.co/HALRYUPZdb
— Saaksha TV (@SaakshaTv) June 16, 2021
ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಟರ್ ನಾನ್#Saakshatv #cookingrecipe #homemade #butter https://t.co/x2exmxmjuH
— Saaksha TV (@SaakshaTv) June 16, 2021
ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಹಾಗಿದ್ದರೆ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ#download #pancard https://t.co/dseCciimAf
— Saaksha TV (@SaakshaTv) June 17, 2021
ಏನಿದು ವೇತನ (Salary) ಖಾತೆ? ಇದರ ಪ್ರಯೋಜನಗಳೇನು?#salaryaccount https://t.co/LCCPGdQUTA
— Saaksha TV (@SaakshaTv) June 16, 2021
#vaccinationfacility








