ನವದೆಹಲಿ : ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಕುರಿತು ಆರೋಗ್ಯ ಸಚಿವಾಲಯ ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದೆ. ದೇಶದಲ್ಲಿ ಶೇ.80ರಷ್ಟು, ಕರ್ನಾಟಕದಲ್ಲಿನ ಶೇ.60ರಷ್ಚು ಕೊರೊನಾ ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇರಲಿಲ್ಲ ಎಂದು ಹೇಳಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಕಂಡುಬಂದ ಒಟ್ಟಾರೆ ಕೊರೊನಾ ವೈರಸ್ ಸೋಂಕಿತರ ಪೈಕಿ ಶೇ.80ರಷ್ಟು ಮಂದಿಯಲ್ಲಿ ವೈರಸ್ ರೋಗ ಲಕ್ಷಣಗಳೇ ಇರಲಿಲ್ಲ. ಈ ಪೈಕಿ ಕರ್ನಾಟಕದ ಸುಮಾರು ಶೇ.60 ರೋಗಿಳಲ್ಲೂ ರೋಗಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ.
ಇನ್ನು ಕರ್ನಾಟಕ ಮಾತ್ರವಲ್ಲದೇ ಒಟ್ಟಾರೆ ಭಾರತದಲ್ಲಿ ಶೇ.80ರಷ್ಡು ಸೋಂಕು ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ. ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕಿತ ದೇಶಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಭಾರತದ ಸೋಂಕು ಪೀಡಿತರ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಈ ಪೈಕಿ ಭಾರತದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಶೇ.80ರಷ್ಟು ಸೋಂಕಿತರಲ್ಲಿ ರೋಗ ಲಕ್ಷಣಗಳೇ ಕಂಡುಬಂದಿಲ್ಲ. ಇದು ಸೋಂಕಿತರನ್ನು ಪತ್ತೆ ಹಚ್ಚಲು ವೈದ್ಯಕೀಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಏಪ್ರಿಲ್ 16ರ ವರೆಗಿನ ಅಂಕಿಅಂಶಗಳ ಪೈಕಿ ರಾಜ್ಯದಲ್ಲಿ ಒಟ್ಟು ದಾಖಲಾಗಿರುವ 315 ಕೊರೊನಾ ಸೋಂಕಿತರ ಪೈಕಿ ಶೇಕಡಾ 60ರಷ್ಟು ಮಂದಿಯಲ್ಲಿ ರೋಗ ಲಕ್ಷಣವೇ ಕಂಡುಬಂದಿಲ್ಲ.
ಶೇ.15ರಷ್ಟು ರೋಗಿಗಳಲ್ಲಿ ಮಾತ್ರ ಮಧ್ಯಮ ಪ್ರಮಾಣದ ವೈರಸ್ ಸೋಂಕು ಲಕ್ಷಣಗಳು ಕಂಡುಬಂದಿದ್ದು, ಶೇ.5ರಷ್ಟು ರೋಗಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.








