ರಾಮನಗರ: ರಾಮನಗರದ ಪಬ್ಲಿಕ್ ಟಿವಿವರದಿಗಾರ ಹನುಮಂತು ಸಾವಿಗೀಡಾಗಿದ್ದಾರೆ. ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.
ರಾಮನಗರದ ಕಾರಾಗೃಹದ ಬಳಿ ಘಟನೆ ಸಂಭವಿಸಿದೆ. ವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತುರವರಿಗಿದೆ.
ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.