“ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿ, ನಮ್ಮಲ್ಲಿ ಹಳ್ಳಿಗೊಂಡು ಹುಲಿ”
ದಾವಣಗೆರೆ : ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜವಾಗಿದೆ. ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿಯಾದರೆ, ನಮ್ಮ ಸಮಾಜದಲ್ಲಿ ಹಳ್ಳಿಗೊಂದು ಹುಲಿಗಳಿವೆ ಎಂದು ಕೂಡಲಸಂಗಮ ಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಕೂಡಲಸಂಗಮ ಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅರುಣ್ ಸಿಂಗ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಮಾನ್ಯತೆ ನೀಡಲು ಕೇಳಿದ್ದೇನೆ.
ಹಾಗೇಯೇ ಅರುಣ್ ಸಿಂಗ್ ಅವರ ಬಳಿ ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇನೆ, ಅವರು ಈ ವಿಚಾರವಾಗಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು.
ಸಿಎಂ ರೇಸ್‍ನಲ್ಲಿ ನಮ್ಮವರು ಮೂರು ಹುಲಿಗಳು ಓಡುತ್ತಿದ್ದಾರೆ. ನಾನು ಒಬ್ಬರ ಹೆಸರು ಹೇಳಿ ಉಳಿದವರ ಮನಸ್ಸಿಗೆ ನೋವು ಮಾಡೋಲ್ಲ.
ಯಡಿಯೂರಪ್ಪ ಈಗಾಗಲೇ ರೇಸ್‍ನಲ್ಲಿ ಓಡಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ. ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜವಾಗಿದೆ.
ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿಯಾದರೆ, ನಮ್ಮ ಸಮಾಜದಲ್ಲಿ ಹಳ್ಳಿಗೊಂದು ಹುಲಿಗಳಿವೆ ಎಂದು ಅಭಿಪ್ರಾಯಪಟ್ಟರು.









