ರಾಜ್ಯದಲ್ಲಿರೋದು ಶೇ.8-10 ಕಮಿಷನ್ ಸರ್ಕಾರ : ಸಿದ್ದರಾಮಯ್ಯ Siddaramaiah
ಬೆಂಗಳೂರು : ರಾಜ್ಯದಲ್ಲಿ ಇರೋದು ಶೇ.8-10 ಕಮಿಷನ್ ಸರ್ಕಾರ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೂರಲ್ ಡೆವಲಪ್ಮೆಂಟ್ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲ ಶೇ. 8-10ರಷ್ಟು ಕಮೀಷನ್ ಸಂಗ್ರಹ ಮಾಡ್ತಿದೆ.
ಅಪ್ಪರ್ ಭದ್ರಾ ಕೇಂದ್ರ ಸರ್ಕಾರದ ಯೋಜನೆಯಲ್ಲೂ ವಿಜಯೇಂದ್ರನೇ ಕಲೆಕ್ಟ್ ಮಾಡ್ತಿದಾರೋ ಇಲ್ಲ ಬೇರೆಯವರು ಕಮಿಷನ್ ಕಲೆಕ್ಟ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ಶೇ.8-10 ಕಮಿಷನ್ ಸರ್ಕಾರ ಅನ್ನೋದು ಗೊತ್ತಿರುವ ವಿಚಾರವೇ ಎಂದು ಗುಡುಗಿದರು.
ಇದೇ ವೇಳೆ ಜಿಂದಾಲ್ ಕಿಕ್ ಬ್ಯಾಕ್ನಲ್ಲಿ ಸಿದ್ದರಾಮಯ್ಯ ಹೆಸರಿದೆ ಎಂಬ ಹೆಚ್ ವಿಶ್ವನಾಥ್ ಆರೋಪಕ್ಕೆ ಟಾಂಗ್ ನೀಡಿದ ಸಿದ್ದರಾಮಯ್ಯ, ಇದನ್ನ ನಾನು ಈ ಹಿಂದೆಯೇ ನಿರಾಕರಿಸಿದ್ದೇನೆ.
ಯಾವುದೋ ಹಳೆಯ ಸುಳ್ಳು ಆರೋಪಗಳಿಗೆ ಉತ್ತರ ಕೊಡ್ತಾ ಕೂರ್ಲಾ ಎಂದು ಪ್ರಶ್ನಿಸಿ ಆರೋಪವನ್ನು ತಳ್ಳಿ ಹಾಕಿದರು.









