ಮಿಲ್ಕಿ ಬ್ಯೂಟಿ ತಮನ್ನಾ ಬ್ಯೂಟಿ ಸೀಕ್ರೆಟ್ ಕೇಳುದ್ರೆ ಶಾಕ್ ಆಗ್ತೀರಾ…!
ಮುಂಬೈ: ಮಿಲ್ಕಿ ಬ್ಯೂಟಿ ಅಂತಲೇ ಖ್ಯಾತಿ ಗಳಿಸಿರುವ ಬಹುಭಾಷಾ ನಟಿ ತಮನ್ನಾ ಭಾಟಿಯಾ ತಮ್ಮ ಸೌಂದರ್ಯದ ರಹಸ್ಯ ಬಿಚ್ಚಿಟ್ಟಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಗ್ಲೋಯಿಂಗ್ ಹಾಗೂ ಸಾಫ್ಟ್ ಸ್ಕಿನ್ ನ ಗುಟ್ಟು ಬಿಚ್ಚಿಟ್ಟಿರುವ ತಮನ್ನಾ ತಮ್ಮ ಎಂಜಲನ್ನ ಮುಖಕ್ಕೆ ಹಚ್ಚಿಕೊಳ್ಳುವುದಾಗಿ ತಿಳಿಸಿದ್ದಾರೆ..
ಹೌದು.. ತಮಗೆ ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ತುಂಬ ರೀತಿಯ ಪ್ರಯತ್ನ ಮಾಡಿದೆ. ಕೊನೆಗೆ ನನ್ನ ಮುಖಕ್ಕೆ ನಾನು ಎಂಜ ಲು ಹಚ್ಚಿಕೊಳ್ಳಲು ಆರಂಭಿಸಿದೆ. ಬೆಳಗಿನಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಅದಕ್ಕೆ ಮೊಡವೆಗಳನ್ನು ಒಣಗಿಸುವ ಸಾಮಥ್ರ್ಯವಿದೆ. ಈ ಬಗ್ಗೆ ಕೇಳುವುದಕ್ಕೆ ನಿಮಗೆಲ್ಲ ತುಂಬ ವಿಚಿತ್ರ ಎನಿಸಬಹುದು. ಆದರೆ ಇದು ತುಂಬ ಪರಿಣಾಮಕಾರಿಯಾಗಿದೆ. ಕೂದಲ ಆರೈಕೆ ಸಹ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ತಮ್ಮನ್ನಾ ಉತ್ತರ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ.
ಇನ್ನೂ ಸಿನಿಮಾದ ವಿಚಾರಕ್ಕೆ ಬಂದ್ರೆ ತಮನ್ನಾ ಹಲವು ಸಿನಿಮಾಗಳು , ವೆನ್ ಸೀರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ನಿತಿನ್ ನಟನೆಯ ಮ್ಯಾಸ್ಟ್ರೋ, ಕನ್ನಡ ಲವ್ ಮಾಕ್‍ಟೇಲ್ ರಿಮೇಕ್ ಸಿನಿಮಾ ಗುತುರಂದ ಸೀತಕಾಲಂ, ಗೋಪಿಚಂದ್ ನಟನೆಯ ಸೀಟಿ ಮಾರ್ ಇನ್ನೂ ಸಾಕಷ್ಟು ಸಿನಿಮಾ , ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ.









