ಮುಂದಿನ ವರ್ಷದೊಳಗೆ ವಾಯುಪಡೆಗೆ ‘ರಫೇಲ್’ ಸೇರ್ಪಡೆ..!
ಫ್ರಾನ್ಸ್ : ಫ್ರಾನ್ಸ್ ನಿಂದ ಭಾರತಕ್ಕೆ ಬಂದಿರುವ 36 ‘ರಣಬೇಟೆಗಾರ’ ರಫೇಲ್ ಫೈಟರ್ ಜೆಟ್ ಗಳನ್ನ ಮುಂದಿನ ವರ್ಷದೊಳಗೆ ಅಂದ್ರೆ 2022ರಷ್ಟರಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಭಾರತೀಯ ವಾಯಪಡೆ ಮುಖ್ಯಸ್ಥರಾದ ಆರ್ ಕೆಎಸ್ ಭದೌರಿಯಾ ಹೇಳಿದ್ದಾರೆ.
ದುಗಾಲ್ ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ‘ಕಂಬೈಡ್ ಗ್ರಾಜುಯೇಶನ್ ಪರೇಡ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು ಭಾರತಕ್ಕೆ ಬಂದಿರುವ ರಫೇಲ್ ಯುದ್ಧ ವಿಮಾನಗಳನ್ನು, 2022ರೊಳಗೆ ವಾಯುಪಡೆಗೆ ಸೇರ್ಪಡೆಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ಅಲ್ಲದೇ ಕೋವಿಡ್–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಒಂದೆರಡು ವಿಮಾನಗಳು ಬರುವುದು ವಿಳಂಬವಾಗಿದೆ. ಇನ್ನು ಉಳಿದ ವಿಮಾನಗಳೆಲ್ಲ ನಿಗದಿತ ಸಮಯಕ್ಕೆ ಬಂದು ತಲುಪಿವೆ. ನಿಗದಿತ ಅವಧಿಯಲ್ಲೇ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಹೇಳಿದರು.
ವಿಶ್ವ ನಾಯಕರ ಪೈಕಿ ಸರ್ವ ಶ್ರೇಷ್ಠ ಸ್ಥಾನದಲ್ಲಿ ನಮೋ : ಮೋದಿ…ನಂಬರ್. 1
ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ 36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ 23 ಸೆಪ್ಟಂಬರ್ 2016 ಶುಕ್ರವಾರ ಸಹಿ ಹಾಕಿವೆ. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ ಯುರೋ) ವ್ಯವಹಾರಿಕ ಮೊತ್ತ ಇದಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








