ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ, ಗರ್ಭಪಾತ, ಭ್ರೂಣ ದಹನ ಮಾಡಿದ್ದ ಕಟುಕರ ಬಂಧನ
ಮಹಾರಾಷ್ಟ್ರ : ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಆಕೆಗೆ ಗರ್ಭಪಾತ ಮಾಡಿ 4 ತಿಂಗಳ ಭ್ರೂಣವನ್ನು ಸುಟ್ಟುಹಾಕಿರುವ ಆಗಾತಕಾರಿ ಘಟನೆ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ 70 ವರ್ಷದ ವೃದ್ಧ ಮತ್ತು ಆತನ (50ವರ್ಷದ )ಸ್ನೇಹಿತ (50ವರ್ಷ)ನನ್ನು ಪೊಲೀಸರು ಬಂಧಿಸಿದ್ದಾರೆ. ಬುಲ್ದಾನಾ ಜಿಲ್ಲೆಯ ಜಲಗಾವ್ ಜಮದ್ ತಾಲೂಕಿನ ಇಸ್ಲಾಮ್ ಪುರದಲ್ಲಿರುವ ವೃದ್ಧನ ತೋಟಕ್ಕೆ ಬುದ್ಧಿಮಾಂದ್ಯ ಯುವತಿ ಆಗಾಗ ಹೋಗಿ ಬರುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೃದ್ಧ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿದು ಬಂದಿದೆ.
ನಂತರ, 2021ರ ಮಾರ್ಚ್‌ನಲ್ಲಿ ವೃದ್ಧನ ಸ್ನೇಹಿತನೂ ಕೂಡ ಯುವತಿಯ ಮೇಲೆ ಆಗಾಗ ಲೈಂಗಿಕ ದೌರ್ಜನ್ಯ ನಡೆಸಿರುವುದು ಗೊತ್ತಾಗಿದೆ. ಅಲ್ಲದೇ ಯುವತಿ ಗರ್ಭವತಿಯಾಗಿದ್ದು, ಆಕೆಗೆ ಆರೋಪಿಗಳಿಬ್ಬರೂ ಸೇರಿ ಗರ್ಭಪಾತದ ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದಾರೆ.. ನಾಲ್ಕು ತಿಂಗಳ ಭ್ರೂಣವನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ದೂರು ಸಲ್ಲಿಕೆಯಾದ ನಂತರದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.








