ಬಿಎಸ್ ವೈ ಬಗ್ಗೆ ಮಠಾಧೀಶರಿಗೆ ಯಾಕಿಷ್ಟು ಒಲವು : ವಾಟಾಳ್
ಮೈಸೂರು : ಬಿ.ಡಿ.ಜತ್ತಿ, ಎಸ್. ನಿಜಲಿಂಗಪ್ಪ, ಕಂಠಿ ಅವರ ಮೇಲಿಲ್ಲದ ಒಲವು ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಯಾಕೆ ಬಂದಿದೆ.
ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮಠಾಧೀಶರಿಗೆ ಯಾಕೆ ಅಷ್ಟೊಂದು ಒಲವು ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ಬಿಎಸ್ ಯಡಿಯೂರಪ್ಪ ಪರ ಮಠಾಧೀಶರು ನಿಂತಿರುವ ಬಗ್ಗೆ ನಗರದಲ್ಲಿ ಹಾಡಿರ್ಂಗ್ ವೃತ್ತದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಡಿ.ಜತ್ತಿ, ಎಸ್. ನಿಜಲಿಂಗಪ್ಪ, ಕಂಠಿ ಅವರ ಮೇಲಿಲ್ಲದ ಒಲವು ಈಗ ಯಡಿಯೂರಪ್ಪ ಮೇಲೆ ಯಾಕೆ ಬಂದಿದೆ.
ಆಗ ಈ ಮಠಾಧೀಶರು ಯಾಕೆ ಆಚೆ ಬರಲಿಲ್ಲ. ಈಗ ಯಾಕೆ ಯಡಿಯೂರಪ್ಪನವರ ಮೇಲೆ ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ. ಮಠಾಧೀಶರು ರಾಜಕೀಯಕ್ಕೆ ಪ್ರವೇಶ ಕೊಡಬಾರದು ಎಂದು ಟೀಕೆ ಮಾಡಿದರು.
ಇದೇ ವೇಳೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹೈಕಮಾಂಡ್ ಎಂದ ವಾಟಾಳ್ ನಾಗರಾಜ್, ಯಡಿಯೂರಪ್ಪ ಹೇಳಿದಂತೆ ಅವರ ಪಕ್ಷದ ಹೈಕಮಾಂಡ್ ಕೇಳಬೇಕು.
ಮಂತ್ರಿಗಳು ಇಲ್ಲ, ಶಾಸಕರು ಇಲ್ಲ, ಸಂಸದರೂ ಇಲ್ಲ, ಎಲ್ಲರನ್ನೂ ಎದುರಿಸಿ ಇಟ್ಟುಕೊಂಡಿದ್ದಾರೆ. ಬಿಜೆಪಿ ಉಸ್ತುವಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ ಅಷ್ಟೇ.
ರಾಜ್ಯದಲ್ಲಿ ಕೊರೊನಾ ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಟ್ಟು, ಹೊಸ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.









