ಶಿವಮೊಗ್ಗ | ವೃದ್ಧೆಯ ಸರ ಕದ್ದ ಖದೀಮರ ಬಂಧನ shivamogga
ಶಿವಮೊಗ್ಗ : ವೃದ್ಧೆಯೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪವನ (19), ವಿಷ್ಣು (19) ಹಾಗೂ ಮಹೇಶ (19) ಬಂಧಿತ ಆರೋಪಿಗಳಾಗಿದ್ದಾರೆ.
ಇದೇ ತಿಂಗಳ 19 ರಂದು ವೃದ್ಧೆ ಲಕ್ಷ್ಮಮ್ಮ ಎಂಬುವರು ನಗರದ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಮೂವರು ಅಪರಿಚಿತ ಯುವಕರು ವೃದ್ಧೆಯ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದರು.
ಈ ಕುರಿತು ವೃದ್ಧೆ ಲಕ್ಷ್ಮಮ್ಮ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 4 ಲಕ್ಷದ 63 ಸಾವಿರ ರೂ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.









