ಪಿಎಂ ಕೇರ್ಸ್ ಲೆಕ್ಕವನ್ನ ಜನರು ಕೇಳಿದರೆ ನೀಡುತ್ತೇವೆ : ಬಿ.ಸಿ.ಪಾಟೀಲ್
ಹಾವೇರಿ : ಪಿಎಂ ಕೇರ್ಸ್ ಲೆಕ್ಕವನ್ನ ಜನರು ಕೇಳಿದರೆ ನೀಡುತ್ತೇವೆ. ಕಾಂಗ್ರೆಸ್ನವರಿಗೆ ಇದರ ಲೆಕ್ಕ ಕೊಡೋ ಅಗತ್ಯವಿಲ್ಲ. ಆರೋಪ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದ್ದಾರೆ
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನ ದೇವಸ್ಥಾನ ಕಟ್ಟಬೇಕು ಎಂಬುದು ಬಿಜೆಪಿಯವರ ಅಜೆಂಡಾದಲ್ಲಿದೆ.
ರಾಮ ಮಂದಿರದ ಹಣವನ್ನ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ಪಿಎಂ ಕೇರ್ಸ್ ಲೆಕ್ಕವನ್ನ ಜನರು ಕೇಳಿದರೆ ನೀಡುತ್ತೇವೆ.
ಕಾಂಗ್ರೆಸ್ನವರಿಗೆ ಇದರ ಲೆಕ್ಕ ಕೊಡೋ ಅಗತ್ಯವಿಲ್ಲ. ಆರೋಪ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ. ಕೊರೊನಾ ಮೂರನೆ ಅಲೆ ಬರೋ ಸಾಧ್ಯತೆ ಇದೆ.
ರಾಜಕಾರಣ ಮಾಡೋ ಸಮಯ ಇದಲ್ಲ. ರಾಜಕಾರಣಕ್ಕೆ ಪ್ರತ್ಯೇಕ ಸಮಯ ಮೀಸಲಿಡೋಣ ಎಂದರು.
ಇನ್ನು ನಾಯಕತ್ವ ಬದಲಾವಣೆ ಮತ್ತು ಹೆಚ್ ವಿಶ್ವನಾಥ್ ಆರೋಪದ ಬಗ್ಗೆ ಮಾತನಾಡಿ, ಪಕ್ಷ ವಿರೋಧಿ, ಅನುಪಯುಕ್ತ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಅರುಣ್ ಸಿಂಗ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸಿಎಂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರ ಆರೋಪಗಳು ಆಧಾರದ ರಹಿತ ಆರೋಪಗಳಾಗಿವೆ.
ಇದೊಂದು ಬೇಸ್ ಲೆಸ್ ಹೇಳಿಕೆಯಾಗಿದೆ. ಆರೋಪ ಮಾಡೋರಿಗೆ ಬೇರೆ ಕೆಲಸವಿಲ್ಲ, ಆರೋಪ ಮಾಡ್ತಿದ್ದಾರೆ ಎಂದು ವಿಶ್ವನಾಥ್ ಗೆ ಟಾಂಗ್ ನೀಡಿದರು.









