ಮಗನಿಗೆ ದುಬಾರಿ ಕಾರ್ ಗಿಫ್ಟ್ – ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಸೋನು ಸುದ್
ಸೋಸು ಸೂದ್ ತಮ್ಮ ಮಾನವೀಯ ಗುಣಗಳಿಂದಲೇ ಜನರ ಮನಗೆದ್ದಿರುವ ಸಹೃದಯಿ.. ಕಷ್ಟ ಅಂತ ಬಂದವರು ಯಾರೇ ಇರಲಿ ಸಹಾಯ ಮಾಡುವ ಸೋನು ಕಳೆದ ಲಾಕ್ ಡೌನ್ ನಿಂದ ಹಿಡಿದು ಇಲ್ಲಿಯವರೆಗೂ ಅನೇಕರಿಗೆ ನೆರವಾಗಿ ರಿಯಲ್ ಹೀರೋ ಆಗಿದ್ದಾರೆ.. ಆದ್ರೆ ಕೆಲವೊಮ್ಮೆ ಕೆಲವಟು ಸೋನು ಅವರನ್ನ ಟೀಕೆ ಮಾಡುತ್ತಾ ಟ್ರೋಲ್ ಗಳನ್ನ ಮಾಡುವವರೂ ಇದ್ದಾರೆ..
ಹೌದು ಇದೀಗ ಸೋನು ಸೂದ್ ಮಗನಿಗೆ ದುಬಾರಿ ಕಾರ್ ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಫಾದರ್ಸ್ ಡೇ ದಿನ ಸೋನು ಸೂದ್ ತನ್ನ ಹಿರಿಯ ಮಗ ಇಶಾನ್ ಗೆ 3 ಕೋಟಿ ರೂ. ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಸೋನು ಸೂದ್ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಹೌದು.. ‘ ನಾನು ನನ್ನ ಮಗನಿಗಾಗಿ ಕಾರು ಖರೀದಿಸಿಲ್ಲ. ಫ್ಯಾಮಿಲಿಗಾಗಿ ಕಾರನ್ನು ಖರೀದಿಸಲು ಟ್ರಯಲ್ ನೋಡಿದ್ದು. ನಾವು ಟೆಸ್ಟ್ ಡ್ರೈವ್ ಗೆ ಹೋಗಿದ್ವಿ ಅಷ್ಟೆ. ಯಾವುದೇ ಕಾರು ಖರೀದಿಸಿಲ್ಲ ಎಂದು ಹೇಳಿದ್ದಾರೆ. ‘ಫಾದರ್ಸ್ ಡೇ ದಿನ ನಾನು ನನ್ನ ಮಗನಿಗೆ ಯಾಕೆ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ. ಅವನು ನನಗೆ ಉಡುಗೊರೆ ನೀಡಬೇಕಲ್ಲವೇ. ಇದು ನನ್ನ ದಿನ’ ಎಂದು ಹೇಳೋ ಮೂಲಕ ತಮ್ಮದೇ ಶೈಲಿಯಲ್ಲಿ ವದಂತಿಗಳನ್ನ ಹಬ್ಬುತ್ತಿರುವವರಿಗೆ ಉತ್ತರ ನೀಡಿದ್ದಾರೆ.
ಅಲ್ಲದೇ ‘ ಬೆಸ್ಟ್ ಫಾದರ್ಸ್ ಡೇ ಗಿಫ್ಟ್ ಅಂದರೆ ನನ್ನ ಇಬ್ಬರೂ ಮಕ್ಕಳು ನನ್ನ ಜೊತೆ ಸಮಯ ಕಳೆಯುವುದು. ನಾನು ಅವರಿಗೆ ಹೆಚ್ಚು ಸಮಯ ನೀಡಿಲ್ಲ. ಈಗ ಅವರು ಬೆಳೆಯುತ್ತಿದ್ದಾರೆ. ಅವರು ತಮ್ಮದೆ ಆದ ಜೀವನ ಹೊಂದಿದ್ದಾರೆ. ಈ ದಿನವನ್ನು ಒಟ್ಟಿಗೆ ಕಳೆಯುವುದೇ ಐಷಾರಾಮಿ. ಇದನ್ನು ನಾನು ಸಂಪಾದಿಸಿದ್ದೇನೆ’ ಎಂದು ಹೇಳಿದ್ದಾರೆ.
ಜೊತೆಗೆ ‘ಜನರಿಗೆ ನಾನು ಸಹಾಯ ಮಾಡಿದಾಗ ಸಿಕ್ಕ ಪ್ರತಿಕ್ರಿಯೆ ಮತ್ತು ಅವರ ಪ್ರೀತಿ ನಾನು ಪಡೆದ ಅತ್ಯುತ್ತಮ ಉಡುಗೊರೆಯಾಗಿದೆ. ನನ್ನ ವಿರುದ್ಧ ಕೆಟ್ಟದಾಗಿ ಪ್ರಚಾರ ಮಾಡುವ ಸಂದೇಹವಾದಿಗಳು ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಒಳ್ಳೆಯ ಕೆಲಸಗಳು ಅಲ್ಲಿರುವ ನನ್ನ ಹಿತೈಷಿಗಳು ಅನುಮಾನಿಸುವುದಿಲ್ಲ’ ಎಂದಿದ್ದಾರೆ.