ಸೀರೆ ಉಟ್ಟು ವಿದೇಶ ಸುತ್ತಿದ ತಾಪ್ಸಿ ಕಾಲೆಳೆದ ಕಂಗನಾ ಸಹೋದರಿ..!
ಬಾಲಿವುಡ್ ನಟಿ , ಕಾಂಟ್ರವರ್ಸಿ ಕ್ವೀನ್ ಕಂಗನಾಗೆ ಕಿರಿಕ್ ಅಂದ್ರ ಭಾರೀ ಇಷ್ಟ ಅನ್ನೋದು ಎಲ್ರಿಗೂ ಗೊತ್ತಿರುವ ಸಂಗತಿಯೇ.. ಒಂದಲ್ಲಾ ಒಂದು ಕಿರಿಕ್ ತೆಗೆದು, ಯಾವುದಾದ್ರೂ ವಿಚಾರದ ಬಗ್ಗೆ ವಿವಾದ ಮೈಮೇಲೆ ಎಳೆದುಕೊಂಡು ಲೈಮ್ ಲೈಟ್ ನಲ್ಲಿರೋದು ಕಾಮನ್.. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರದಲ್ಲಿ ಸದಾ ಸ್ಪಾಟ್ ಲೈಟ್ ನಲ್ಲಿಯೆ ಇರೋ ಕಂಗನಾ ರಾಜಕಾರಣಿಗಳು , ಸಿನಿಮಾ ತಾರೆಯರ ಬಳಿಯೂ ಕಿರಿಕ್ ಮಾಡಿಕೊಳ್ತಲೇ ಇರುತ್ತಾರೆ.. ಬೇಡದೇ ಇರೋ ವಿಚಾರಗಳಿಗೆ ಮೂಗು ತೂರಿಸುವುದು ಕೂಡ ಕಾಮನ್.. ಆದ್ರೆ ಅವರ ಸಹೋದರಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.. 
ಕಂಗನಾ ಹಾಗೂ ಅವರ ಸಹೋದರಿ ಆಗಾಗ ಸಹ ಕಲಾವಿದರ ಕಾಲೆಳೆಯುವುದು ಸಾಮಾನ್ಯ ಆಗೋಗಿದೆ.. ಕಂಗನಾಗೆ ಈಗಾಗಲೇ ಟ್ವಿಟ್ಟರ್ ನಿಂದ ಗೇಟ್ ಪಾಸ್ ಕೊಟ್ಟಾಗಿದೆ.. ಇದೀಗ ಕಂಗನಾ ಸಹೋದರಿ ರಂಗೋಲಿ ತಾಪ್ಸಿ ಕಾಲೆಳೆದಿದ್ದಾರೆ.. ರಂಗೋಲಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಾಪ್ಸಿ ಸೀರೆ ಉಟ್ಟು ವಿದೇಶದಲ್ಲಿ ಸುತ್ತಾಡಿರುವುದನ್ನ ಅಣಕಿಸಿದ್ದಾರೆ..
ಹೌದು.. ಸಹೋದರಿ ಕಂಗನಾ ರಣಾವತ್ ಫೋಟೋಗಳನ್ನು ಹಂಚಿಕೊಂಡು ಹಾಡಿ ಹೊಗಳಿದ್ದಾರೆ. ಕಂಗನಾ ಸೀರೆ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿ, ‘ಗ್ರೇಟ್ ಸ್ಟೈಲ್ ಐಕಾನ್’ , ‘ಯುವತಿಯರು ಹೇಗೆ ಸ್ಫೂರ್ತಿ ಪಡೆಯುತ್ತಾರೆ ಮತ್ತು ಅವಳನ್ನು ಅನುಸರಿಸುತ್ತಾರೆ ಎಂದು ನೋಡಲು ತುಂಬಾ ಸಂತೋಷವಾಗುತ್ತೆ, ಅನೇಕರು ಕಂಗನಾರನ್ನು ಫೋಲೋ ಮಾಡುತ್ತಿದ್ದಾರೆ’ ಎಂದು ಹೊಗಳಿದ್ದಾರೆ.
ಬಳಿಕ ತಾಪ್ಸಿ ವಿದೇಶದಲ್ಲಿ ಸೀರೆ ಧರಿಸಿ ಓಡಾಡುತ್ತಿರುವ ಫೋಟೋ ಶೇರ್ ಮಾಡಿ, ಕಂಗನಾರನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಪೋಸ್ಟ್‌ನಲ್ಲಿ ‘ಸ್ವಂತ ಪ್ರತಿಭೆ ಇಲ್ಲದಿರುವುದರಿಂದ ಕಂಗನಾರನ್ನೇ ಕಾಪಿ ಮಾಡಿದ್ದೀರಾ. ಇದು ಚೀಪ್ ಅನುಕರಣೆ’ಎಂದು ಬರೆದುಕೊಂಡಿದ್ದಾರೆ.
‘ಪ್ರತಿ ಸಂದರ್ಶನವನ್ನು ಕಾಪಿ ಮಾಡುವುದು ಮಾತ್ರವಲ್ಲದೆ ಲೆಜೆಂಡ್ ಕಂಗನಾ ಸ್ಟೈಲ್ ಮತ್ತು ಕೆಲಸದ ಮಾದರಿಯನ್ನು ನಕಲು ಮಾಡುತ್ತಾರೆ. ಇದನ್ನು ನೋಡಿದಾಗ ನಾನು ಆಶ್ವರ್ಯ ಪಡುತ್ತೇನೆ, ಆದರೆ ನಕಲು ಉತ್ತಮವಾಗಿದೆ’ ಎಂದಿದ್ದಾರೆ.
ಒಟ್ನಲ್ಲಿ ತಾಪ್ಸಿ ಆಗಿರಲಿ ಮತ್ತೊಬ್ಬ ನಟ ನಟಿ ಆಗಿರಲಿ ಅವರನ್ನ ಕಂಗನಾ ಹಾಗೂ ಅವರ ಸಹೋದರಿ ಆಗಾಗ ಕೆಣಕುತ್ತಳೆ ಸುದ್ದಿಯಲ್ಲಿರುತ್ತಾರೆ. ಈ ಬಾರಿ ತಾಪ್ಸಿ ಇದಕ್ಕೆ ಯಾವ ರೀತಿಯಾದ ಪ್ರತಿಕ್ರಿಯೆ ನೀಡಲಿದ್ದಾರೆ ಅನ್ನೋದನ್ನ ಕಾದು ನೋಡ್ಬೇಕಿದೆ..








