‘ಕೂ’ ಗೆ ಗ್ಯಾಂಡ್ ಎಂಟ್ರಿ ಕೊಟ್ಟ ಸ್ವೀಟಿ : ಖಾತೆ ತೆರೆದ ಕೆಲವೇ ಗಂಟೆಯಲ್ಲಿ ಸಾವಿರಾರು ಪಾಲೋವರ್ಸ್…!
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ‘ಕೂ’ನಲ್ಲಿ ಖಾತೆ ತೆರೆದಿದ್ದಾರೆ. ಈ ಬಗ್ಗೆ ಸ್ವೀಟಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅನುಷ್ಕಾ ‘ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನನ್ನು ಕೂನಲ್ಲಿ ಕಾಣಬಹುದು. ನನ್ನ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಯಲು ‘ಕೂ’ನಲ್ಲಿ ನನ್ನನ್ನು ಫಾಲೋ ಮಾಡಿ’ ಎಂದು ವಿನಂತಿಸಿದ್ದಾರೆ.
ಇನ್ನೂ ಕೆಲವೇ ಗಂಟೆಯಲ್ಲಿ ಅನುಷ್ಕಾಗೆ ಸಾವಿರಾರು ಮಂದಿ ಫಾಲೋವರ್ಸ್ ಗಳಾಗಿದ್ದಾರೆ.. ಈಗಾಗಲೇ ಅನುಷ್ಕಾ ಕೋನಲ್ಲಿ 10,309 ಜನ ಹಿಂಬಾಲಕರು ಹೊಂದಿದ್ದಾರೆ. ಆದರೆ, ಇದುವರೆಗೂ ಒಬ್ಬರನ್ನು ತಾವು ಫಾಲೋ ಮಾಡ್ತಿಲ್ಲ.
ಇನ್ನೂ ಇತ್ತೀಚೆಗೆ ಟ್ವಿಟ್ಟರ್ ನಿಂದ ಬಾಲಿವುಡ್ ನಟಿ , ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಗೆ ಟ್ವಿಟ್ಟರ್ ಶಾಶ್ವತವಾಗಿ ಗೇಟ್ ಪಾಸ್ ಕೊಟ್ಟ ಬಳಿಕ ಕಂಗನಾ ಕೂಡ ಕೂ ಆಪ್ ಗೆ ಮಮದಿದ್ದರು.. ಇನ್ನೂ ಈ ಕೂ ಆಪ್ ಸ್ವದೇಶಿ ಆಪ್ ಆಗಿರೋದು ಖುಷಿಕರ ವಿಚಾರವೂ ಹೌದು.. ಬಹುತೇಕ ಸೆಲೆಬ್ರಿಟಿಗಳು ಈಗ ಕೂನತ್ತ ಆಕರ್ಷಿತರಾಗ್ತಿದ್ದಾರೆ..