ಮೈಸೂರಲ್ಲಿ ಮತ್ತೆ ಮೂವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ
ಮೈಸೂರು : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇಂದು ಮತ್ತೆ ಮೂವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ಇದು ಜಿಲ್ಲೆಯಾದ್ಯಂತ ಆತಂಕ ಸೃಷ್ಟಿ ಮಾಡಿದೆ.
ಬುಧವಾರ ಸಂಜೆ ಮೂವರಿಗೆ ಡೆಲ್ಟಾ ಪ್ಲಸ್ ದೃಢಪಟ್ಟಿದ್ದು, ಬೆಂಗಳೂರಿನ ನಿಮ್ಹಾನ್ಸ್ ಪ್ರಯೋಗಾಲಯದಿಂದ ಮಾಹಿತಿ ದೊರೆತಿದೆ.
ಇದಕ್ಕೂ ಮುನ್ನ ಒಂದು ಡೆಲ್ಟಾ ಪ್ಲಸ್ ಕೇಸ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈವರೆಗೆ ಒಟ್ಟು ನಾಲ್ಕು ಡೆಲ್ಟಾ ಪ್ಲಸ್ ಪ್ರಕರಣಗಳು ಬೆಳಕಿಗೆ ಬಂದಿದೆ.
ಇತ್ತ ಬೆಂಗಳೂರಿನಲ್ಲೂ ಕೊಡ ಡೆಲ್ಟಾ ಪ್ಲಸ್ ವೈರಸ್ ತನ್ನ ಕಬಂದ ಬಾಹುಗಳನ್ನು ಚಾಚಿದ್ದು, ಬೆಂಗಳೂರಿನ ಹಿರಿಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.









