ರಸ್ತೆ ಬದಿಯಲ್ಲಿ ಬ್ರೆಡ್ ಮಾರಿದ ಸೋನು ಸೂದ್ – ವಿಡಿಯೋ ವೈರಲ್
ಮುಂಬೈ: ಸೋಸು ಸೂದ್ ತಮ್ಮ ಮಾನವೀಯ ಗುಣಗಳಿಂದಲೇ ಜನರ ಮನಗೆದ್ದಿರುವ ಸಹೃದಯಿ.. ಕಷ್ಟ ಅಂತ ಬಂದವರು ಯಾರೇ ಇರಲಿ ಸಹಾಯ ಮಾಡುವ ಸೋನು ಕಳೆದ ಲಾಕ್ ಡೌನ್ ನಿಂದ ಹಿಡಿದು ಇಲ್ಲಿಯವರೆಗೂ ಅನೇಕರಿಗೆ ನೆರವಾಗಿ ರಿಯಲ್ ಹೀರೋ ಆಗಿದ್ದಾರೆ..
ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುವ ಸಹೃದಯಿ ಸೋನು ಸೂದ್ ಅವರು ಈಗಾಗಲೇ ಜನರ ಮನಸಲ್ಲಿ ಮನೆಮಾಡಿದ್ದಾರೆ.. ಇದೀಗ ಸೋದು ಸೂದ್ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಪ್ರೋತ್ಸಾಹಿಸಲು ತಾವೇ ಖುದ್ದು ರಸ್ತೆ ಬದಿ ಬ್ರೆಡ್ ಮಾರಿದ್ದು, ಮತ್ತೊಮ್ಮೆ ತಮ್ಮ ಮಾನವೀಯ ಗುಣದಿಂದ ನೆಟ್ಟಿಗರ ಮನಗೆದ್ದಿದ್ದಾರೆ.
ಹೌದು.. ನಟ ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತಾವೇ ರಸ್ತೆ ಬದಿಯಲ್ಲಿ ಬ್ರೆಡ್ ಹಾಗೂ ಮೊಟ್ಟೆ ಮಾರಾಟ ಮಾಡಲು ಇಳಿದಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳಲ್ಲಿ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡಿದ್ದಾರೆ.
ಈ ಸಂಬಂಧ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಟ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ನಟ ಬೈಸಿಕಲ್ ನಲ್ಲಿ ಮೊಟ್ಟೆ, ಬ್ರೆಡ್ ಹಾಗೂ ಇನ್ನಿತರ ಅತ್ಯವಶ್ಯಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸೋನು ಸೋದ್ ಸೂಪರ್ ಮಾರ್ಕೆಟ್ ಎಂದು ಹೆಸರಿಟ್ಟಿದ್ದಾರೆ. 10 ಮೊಟ್ಟೆ ತಗೊಂಡ್ರೆ 1 ಬ್ರೆಡ್ ಉಚಿತ. ಅಲ್ಲದೆ ಉಚಿವಾಗಿ ಡೆಲಿವರಿ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಒಟ್ಟನಲ್ಲಿ ತನ್ನ ಸಹಾಯ ಮಾಡುವ ಮನೋಭಾವದಿಂದಲೇ ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿರುವ ಸೋನು ಸೂದ್, ತನ್ನ ಹೊಸ ವೀಡಿಯೊದಿಂದ ಜನರನ್ನು ನಗಿಸುವಂತೆ ಮಾಡಿದ್ದಾರೆ. ಮಾಲ್‍ಗಳು ಮುಚ್ಚಲ್ಪಟ್ಟಿದ್ದರೂ ಸಹ ಒಂದು ಪ್ರಮುಖ ಸೂಪರ್ ಮಾರ್ಕೆಟ್ ತೆರೆದಿರುತ್ತದೆ ಎಂದು ಹೇಳುವ ಮೂಲಕ ಅವನು ಅದನ್ನು ಪ್ರಾರಂಭಿಸಿದ್ದಾರೆ. ಮೊಟ್ಟೆಯಿಂದ ಹಿಡಿದು ಬ್ರೆಡ್‍ವರೆಗೆ ‘ಸೋನು ಸೂದ್ ಕಿ ಸೂಪರ್ಮಾರ್ಕೆಟ್ ಎಕ್ಡಮ್ ಹೈ ಬಾಸ್ ಹಿಟ್’ ಎಂದು ಹೇಳುತ್ತಾ ಬೀದಿ ಬೀದಿಯಲ್ಲಿ ಮಾರಾಟ ಮಾಡಿದ್ದಾರೆ.