ಎತ್ತಿನ ಮೇಲೆ `ಮುಂದಿನ ಸಿಎಂ ಸಿದ್ದರಾಮಯ್ಯ’ ಬರಹ siddaramaiah
ಗದಗ : ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇದೆ. ಆದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಶುರುವಾಗಿದ್ದು, ಶಾಸಕರು ತಮ್ಮ ನಾಯಕರುಗಳ ಹೆಸರುಗಳನ್ನ ಬಹಿರಂಗವಾಗಿ ಹೇಳುತ್ತಿದ್ದಾರೆ. ಅದರಲ್ಲೂ ಮುಂದಿನ ಸಿಎಂ ಸಿದ್ದರಾಮಯ್ಯನವರೇ ಆಗಬೇಕು ಎಂದು ಕಾಂಗ್ರೆಸ್ ನ ಸಾಕಷ್ಟು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಶಾಸಕರಿಗೆ ಸೀಮಿತವಾಗಿರದೇ ಅಭಿಮಾನಿಗಳು ಕೂಡ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸಿದ್ದರಾಮಯ್ಯ ಅಭಿಮಾನಿಗಳು ಕಾರ ಹುಣ್ಣಿಮೆಗೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬರೆದು ಅಭಿಮಾನ ತೋರಿಸಿದ್ದಾರೆ.

ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ಸಿಂಗರಿಸಲಾಗಿತ್ತು. ಹೀಗೆ ಸಿಂಗರಿಸಿದ ಎತ್ತಿನ ಮೇಲೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕ್ಯಾಂಪೇನ್ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಸಿಎಂ ಕ್ಯಾಪೇನ್ ನ ಎತ್ತಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.








