ಅಪಾಯಕಾರಿ ಚಾಲನೆ : ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಕಾರಿಗೆ ದಂಡ ಹಾಕಿದ ಪೊಲೀಸರು
ನವದೆಹಲಿ: ಅಪಾಯಕಾರಿ ಚಾಲನೆ ಮಾಡಿರುವ ಕಾರಣಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ. ದೆಹಲಿಯ ಸುಖ್ ದೇವ್ ವಿಹಾರ್ ಪ್ರದೇಶದಲ್ಲಿರುವ ತಮ್ಮ ಕಚೇರಿಗೆ ಭದ್ರತಾ ಸಿಬ್ಬಂದಿ ಜೊತೆಗೆ ಹೋಗುತ್ತಿದ್ದ ವೇಳೆ ಅಪಾಯಕಾರಿಯಾಗಿ ನಿರ್ಲಕ್ಷ್ಯ ಚಾಲನೆ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ದಂಡ ವಿಧಿಸಲಾಗಿದೆ.
ಕಾರನ್ನು ಅವರ ಚಾಲಕ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ಅಪಾಯಕಾರಿ ವಾಹನ ಚಾಲನೆ ಅಡಿಯಲ್ಲಿ ಈ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ನಿನ್ನೆ ಬೆಳಗ್ಗೆ ರಾಬರ್ಟ್ ವಾದ್ರಾ ಅವರು ಕಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬರಾಪುಲ್ಲಾ ಫ್ಲೈಓವರ್ ಬಳಿ ವಾಹನದ ಚಾಲಕ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ಭದ್ರತಾ ಸಿಬ್ಬಂದಿ ವಾಹನ ಡಿಕ್ಕಿ ಹೊಡೆದಿದೆ.
ಚೀನಾದ ಕೋವಿಡ್ ಲಸಿಕೆ ಪಡೆದ ದೇಶಗಳಲ್ಲಿ ಕೊರೊನಾ ಹಾವಳಿ ಹೆಚ್ಚಳ
ಕೊರೊನಾ ಭಯ : ತನ್ನ 5 ವರ್ಷದ ಮಗುವಿಗೆ 15 ಬಾರಿ ಚಾಕು ಇರಿದ ತಾಯಿ
ರಸ್ತೆ ಬದಿಯಲ್ಲಿ ಬ್ರೆಡ್ ಮಾರಿದ ಸೋನು ಸೂದ್ – ವಿಡಿಯೋ ವೈರಲ್