ಹಿಂದಿಗೆ ರಿಮೇಕ್ ಆಗ್ತಿದೆ ತೆಲುಗಿನ ‘ನಾಂದಿ’ : ಅಜಯ್ ದೇವಗನ್ ನಿರ್ಮಾಣ
ದಕ್ಷಿಣ ಬಾರತದ ಅನೇಕ ಸಿನಿಮಾಗಳು ಹಿಂದಿಗೆ ರೀಮೇಕ್ ಆಗುತ್ತಿವೆ.. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ.. ಈ ನಡುವೆ ತೆಲುಗು ನಟ ಅಲ್ಲಾರಿ ನರೇಶ್ ನಟನೆಯ ‘ನಾಂದಿ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಮತ್ತು ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಒಟ್ಟಿಗೆ ಸೇರಿ ಬಾಲಿವುಡ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಟ ಅಜಯ್ ದೇವಗನ್ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ರೈಮ್ ಮತ್ತು ಕೋರ್ಟ್ ಸುತ್ತ ನಡೆಯುವ ನಾಂದಿ ಸಿನಿಮಾ ತೆಲಗು ಪ್ರೇಕ್ಷಕರ ಮನ ಗೆದ್ದಿತ್ತು. ಇದೀಗ ಬಾಲಿವುಡ್ ಮಂದಿಯನ್ನು ರಂಜಿಸಲು ಸಿದ್ಧವಾಗುತ್ತಿದೆ. ಈ ಬಗ್ಗೆ ಅಜಯ್ ದೇವಗನ್ ಸಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ‘ಎಲ್ಲರಲ್ಲೂ ಒಂದು ಪ್ರಮುಖ ಕಥೆಯನ್ನು ಹಂಚಿಕೊಳ್ಳುವ ಸಮಯ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ವಿಜಯ್ ಸೇತಪತಿ ನಟನೆಯ ಮಾಸ್ಟರ್ ಸಿನಿಮಾ ಸಹ ಹಿಂದಿಗೆ ರಿಮೇಕ್ ಆಗುತ್ತಿದೆ ಅನ್ನೋ ಸುದ್ದಿ ಹರಿದಾಡಿತ್ತು. ಇದ್ರಲ್ಲಿ ಸಲ್ಮಾನ್ ಖಾನ್ ನಾಯಕಾರಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ನಾಂದಿ ಸಿನಿಮಾ 2021, ಫೆಬ್ರವರಿ 19ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಲ್ಲಾರಿ ನರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವರಲಕ್ಷ್ಮಿ ಶರತ್ ಕುಮಾರ್, ಪ್ರಿಯದರ್ಶಿ ನಾಯಕಿಯರಾಗಿ ನಟಿಸಿದ್ದರು.