“ಬೇರೆ ರಾಜ್ಯದವರು” ಎಂದ ಟಾಲಿವುಡ್ ಸೆಲೆಬ್ರಿಟಿಗಳಿಗೆ ನಾವು “ಯಾವ ದೇಶದಲ್ಲಿದ್ದೇವೆ..?” ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್..!
ಇತ್ತೀಚೆಗೆ ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ‘ಮಾ’ ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಸ್ಪರ್ಧೆ ಮಾಡುತ್ತಿದ್ದು, ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಗಳಾಗಿ ಮಂಚು ವಿಷ್ಣು, ಜೀವಿತಾ ರಾಜಶೇಖರ್ ಸಹ ಅಖಾಡದಲ್ಲಿದ್ದಾರೆ.
ಆದ್ರೆ ಪ್ರಕಾಶ್ ರಾಜ್ ಸ್ಪರ್ಧೆಗೆ ಟಾಲಿವುಡ್ ನ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಲದಕ್ಕೆ ಪ್ರಕಾಶ್ ರಾಜ್ ತೆಲುಗಿನವರಲ್ಲ, ನಮ್ಮವರಲ್ಲ ಬೇರೆ ರಾಜ್ಯದವರು. ಅವರು ಏಕೆ ‘ಮಾ’ ಅಧ್ಯಕ್ಷರಾಗಬೇಕು ಎಂದು ಪ್ರಶ್ನಿಸಿ ಹೀಯಾಳಿಸಿದ್ದಾರೆ. ಈ ಪೈಕಿ ಮಾಧವಿ ಲತಾ, ಕರಾಟೆ ಕಲ್ಯಾಣಿ, ಚಿಟ್ಟಿಬಾಬು ಇದ್ದಾರೆ.
ಇದೀಗ ಅವರ ಪ್ರಶ್ನೆಗಳಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ ಅವರು , ‘ಇದ್ದಕ್ಕಿದ್ದಂತೆ ಲೋಕಲ್, ನಾನ್ ಲೋಕಲ್ ಎಂಬ ಭೇದ ಎಲ್ಲಿಂದ ಬಂತು, ನಾವು ಯಾವ ದೇಶದಲ್ಲಿದ್ದೇವೆ ಅರ್ಥವಾಗುತ್ತಿಲ್ಲ. ಇಲ್ಲಿ ಯಾರು ನಾನ್ ಲೋಕಲ್ ಅಲ್ಲ, ಕಲಾವಿದರು ಯೂನಿವರ್ಸಲ್’ ಎಂದು ತಿರುಗೇಟು ಕೊಟ್ಟಿದ್ದಾರೆ.
ಅಲ್ಲದೇ ‘ನನ್ನ ಸಹಾಯಕರಿಗೆ ತೆಲಂಗಾಣದಲ್ಲಿ ಮನೆ ತೆಗೆದುಕೊಂಡಾಗ ಯಾರೂ ಪ್ರಶ್ನೆ ಮಾಡಿಲ್ಲ, ಎರಡು ಗ್ರಾಮ ದತ್ತು ಪಡೆದಾಗ ಯಾರು ನಾನ್ ಲೋಕಲ್ ಎಂದು ಕೇಳಲಿಲ್ಲ. ನಂದಿ ಪ್ರಶಸ್ತಿ ಪಡೆದಾಗ ಯಾರು ಪ್ರಶ್ನಿಸಿಲ್ಲ. ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಲ್ಲಿ ಹೋಗಿದ್ದರು. ಈಗ ಎಲ್ಲಿಂದ ಬಂತು ನಾನ್ ಲೋಕಲ್ ಮಾತು, ಇದು ಬಹಳ ಸಂಕುಚಿತ ಮನೋಭಾವ ತೋರಿಸುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ.
ಕೊರೊನಾ ಲಸಿಕೆ ಪಡೆದ ಸ್ಯಾಂಡಲ್ ನಟಿ ಮಾಲಾಶ್ರೀ
ಡಾ. ರಾಜ್ ಕುಮಾರ್ ಅವರ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಂಡ ಗೂಗಲ್
ಹಿಂದಿಗೆ ರಿಮೇಕ್ ಆಗ್ತಿದೆ ತೆಲುಗಿನ ‘ನಾಂದಿ’ : ಅಜಯ್ ದೇವಗನ್ ನಿರ್ಮಾಣ
ರಸ್ತೆ ಬದಿಯಲ್ಲಿ ಬ್ರೆಡ್ ಮಾರಿದ ಸೋನು ಸೂದ್ – ವಿಡಿಯೋ ವೈರಲ್