ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು
ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣು ಜನರ ಮೊದಲ ಆಯ್ಕೆಯಾಗಿದೆ. ಇದನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣು ತುಂಬಾ ರುಚಿಕರವಾಗಿದ್ದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ವಿಟಮಿನ್ ಎ, ಸಿ, ಕೆ, ಫೋಲೇಟ್, ಮೆಗ್ನೀಸಿಯಮ್, ಕೋಲೀನ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಮಾವಿನ ಹಣ್ಣಿನಲ್ಲಿ ಕಂಡುಬರುತ್ತವೆ. ಮಾವಿನ ತಿರುಳು ಮಾತ್ರವಲ್ಲ, ಅದರ ಸಿಪ್ಪೆಯೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಮಾವಿನ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ, ಅದನ್ನು ಎಸೆಯುವ ತಪ್ಪನ್ನು ನೀವು ಎಂದಿಗೂ ಮಾಡುವುದಿಲ್ಲ.
ಅಧ್ಯಯನಗಳು ಮತ್ತು ಆರೋಗ್ಯ ತಜ್ಞರ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಸಸ್ಯ ಸಂಯುಕ್ತಗಳು, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದರ ಸೇವನೆಯು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಮಾವಿನ ಸಿಪ್ಪೆಯು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
ಮಾವಿನ ಸಿಪ್ಪೆಯಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇದು ಹೃದ್ರೋಗಗಳಿಂದ ವ್ಯಕ್ತಿಯನ್ನು ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಮತ್ತೊಂದೆಡೆ, ಮಾವಿನ ಸಿಪ್ಪೆಯು ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹ ಸಹಕಾರಿಯಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1407889407550574593?s=19
https://twitter.com/SaakshaTv/status/1407916513064062979?s=19
https://twitter.com/SaakshaTv/status/1407134284595535874?s=19
https://twitter.com/SaakshaTv/status/1407181615835586561?s=19
#Saakshatv #healthtips #mangopeel








