ಜುಲೈನಿಂದ ಅನ್ವಯವಾಗಲಿದೆಯೇ ಹೊಸ ವೇತನ ಸಂಹಿತೆ?
ಮುಂಬರುವ ಜುಲೈ ತಿಂಗಳಿನಲ್ಲಿ ಕಚೇರಿ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ನಿಯಮಗಳು ಜಾರಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಹೊಸ ವೇತನ ಸಂಹಿತೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಬೇಕಾಗಿತ್ತು. ಆದರೆ ಕಾರ್ಮಿಕ ಸಚಿವಾಲಯ ಇದನ್ನು ಮುಂದೂಡಿದ್ದು, ಅದನ್ನು ಜುಲೈನಲ್ಲಿ ಕಾರ್ಯಗತಗೊಳಿಸಬಹುದು ಎಂದು ಹೇಳಲಾಗಿದೆ.
ಈಗಾಗಲೇ ಹೊಸ ಶಿಕ್ಷಣ ನೀತಿಯ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೊಸ ವೇತನ ಸಂಹಿತೆಗಳ ಅಡಿಯಲ್ಲಿ, ಯಾವುದೇ ಉದ್ಯೋಗಿ ಅಥವಾ ಕಾರ್ಮಿಕ 5 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರಿಗೆ 30 ನಿಮಿಷಗಳ ವಿರಾಮವನ್ನು ನೀಡಬೇಕಾಗುತ್ತದೆ. ಈ ನಿಯಮ ಜಾರಿಗೆ ಬಂದರೆ ಉದ್ಯೋಗ ವೃತ್ತಿಯಲ್ಲಿ ಮತ್ತು ವೇತನ ರಚನೆಯಲ್ಲಿ ದೊಡ್ಡ ಬದಲಾವಣೆಯಾಗಬಹುದು ಎಂದು ಹೇಳಲಾಗಿದೆ
ವೇತನ ಸಂಹಿತೆ ಕಾಯ್ದೆಯ ಅನುಷ್ಠಾನದ ನಂತರ, ನೌಕರರ ವೇತನ ರಚನೆಯು ಸಂಪೂರ್ಣವಾಗಿ ಬದಲಾಗುತ್ತದೆ. ಇದರಿಂದಾಗಿ ನೌಕರರ ಮೂಲ ವೇತನವು ಕಂಪನಿಯ ವೆಚ್ಚದ 50 ಪ್ರತಿಶತಕ್ಕಿಂತ ಕಡಿಮೆ ಇರಲು ಸಾಧ್ಯವಿಲ್ಲ.
ಮೂಲ ವೇತನ ಹೆಚ್ಚಳದಿಂದಾಗಿ, ನೌಕರರ ಪಿಎಫ್ ಅನ್ನು ಹೆಚ್ಚು ಕಡಿತಗೊಳಿಸಲಾಗುತ್ತದೆ. ಅಂದರೆ ಅವರ ಭವಿಷ್ಯನಿಧಿ ಕೊಡುಗೆಯು ಹೆಚ್ಚಾಗುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ. ಇದರಿಂದಾಗಿ ನೌಕರರು ನಿವೃತ್ತಿಯ ನಂತರ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ.
ಆದರೆ ಟೇಕ್ ಹೋಂ ಸ್ಯಾಲರಿ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಅಸಂಘಟಿತ ವಲಯದ ಉದ್ಯೋಗಿಗಳಿಗೆ ಹೊಸ ವೇತನ ಸಂಹಿತೆಯೂ ಅನ್ವಯಿಸಲಿದೆ. ಪ್ರತಿ ಉದ್ಯಮ ಮತ್ತು ವಲಯದಲ್ಲಿ ವೇತನ ಮತ್ತು ಬೋನಸ್ ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತದೆ ಮತ್ತು ನೌಕರರ ವೇತನದಲ್ಲಿ ಸಮಾನತೆ ಇರುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #fenugreek https://t.co/43x8RyFjFo
— Saaksha TV (@SaakshaTv) June 24, 2021
ಹಾಗಲಕಾಯಿ ಚಿಪ್ಸ್#Saakshatv #cookingrecipe #hagalkayichips https://t.co/R8KZlW2nhb
— Saaksha TV (@SaakshaTv) June 24, 2021
ಒಂದು ಆಧಾರ್ ಕಾರ್ಡ್ನಿಂದ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು?#simcard #aadhar https://t.co/9y7x1ZNuTY
— Saaksha TV (@SaakshaTv) June 22, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#implementation #WageCodeAct