BIGGBOSS 8 : ಮತ್ತೆ ಕ್ಯಾಪ್ಟನ್ ಆದ ಪುರುಷ ಸದಸ್ಯ – ಮಹಿಳಾ ಸ್ಪರ್ಧಿಗಳ ಅಸಮಾಧಾನ
ಬಿಗ್ ಬಾಸ್ ಸೀಸನ್ 8 ಮೊದಲ ಬಾರಿಗೆ ಶುರುವಾದಾಗಿನಿಂದಲೂ ಹಿಡಿದು ಇಲ್ಲಿವರೆಗೂ ಮನೆಯ ಯಾವೊಬ್ಬ ಮಹಿಳಾ ಸ್ಪರ್ಧಿಯೂ ಸಹ ಕ್ಯಾಪಟ್ನ್ ಆಗಿಲ್ಲ.. ಇದು ಸಹಜವಾಗಿ ಮಹಿಳಾ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.. ಅದ್ಉ ಅಲ್ದೇ ಬಿಗ್ ಬಾಸ್ ಆರಂಭದ ದಿನಗಳಲ್ಲಿ ಮಹಿಳಾ ಸ್ಪರ್ಧಿಗಳೇ ನಿರಂತರವಾಗಿ ಎಲಿಮಿನೇಟ್ ಆಗ್ತಿದ್ದಾಗಲೂ ಮಹಿಳಾ ಸ್ಪರ್ಧಿಗಳು ಸ್ವಲ್ಪ ಬೇಸರಗೊಂಡಿದ್ದರು..
ಇದೀಗ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿದ್ದ ಶೋ ಮತ್ತೆ ಶುರುವಾಗಿದೆ.. 2ನೇ ಇನ್ನಿಂಗ್ಸ್ ನ ಆರಂಭದ ವಾರದಲ್ಲೇ ಮಂಜು ಪಾವಗಡ ಕ್ಯಾಪ್ಟನ್ ಆಗಿದ್ದು, ಮತ್ತೊಮ್ಮೆ ಮಹಿಳಾ ಸ್ಪರ್ಧಿಗಳು ನಿರಾಸೆಗೊಂಡಿದ್ದಾರೆ.
ಅದು ಅಲ್ಲದೇ ಬಿಗ್ ಬಾಸ್ ಶೋ ಆರಂಭವಾಗಿ ಇಷ್ಟು ದಿನಗಳಾದ್ರೂ ಮಹಿಳಾ ಸ್ಪರ್ಧಿಗಳು ಕ್ಯಾಪಟ್ನ್ ಆಗದೇ ಇರೋದು ಬಿಗ್ ಬಾಸ್ ಇತಿಹಾಸಲ್ಲಿ ಇದೇ ಮೊದಲು.. ಈ ವಿಚಾರವಾಗಿ ಮಹಿಳಾ ಸ್ಪರ್ಧಿಗಳಲ್ಲಿ ಕೊಂಚ ಮನಸ್ತಾಪವಾಗಿದೆ.
ಕ್ಯಾಪ್ಟನ್ಸಿ ಟಾಸ್ಕ್ಗೆ ಚಾಲೆಂಜರ್ಸ್ ತಂಡದವರು ಆಯ್ಕೆಯಾಗಿದ್ದರು. ದಿವ್ಯಾ ಉರುಡುಗ, ಪ್ರಿಯಾಂಕ, ಮಂಜು, ಅರವಿಂದ್, ಶಮಂತ್, ರಘು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸಿದ್ದರು. ಖಾಲಿ ಗ್ಲಾಸ್, ಮೊಟ್ಟೆಯನ್ನು ಇರಿಸಲಾಗಿತ್ತು. ಮೊಟ್ಟೆ ಇರುವ ಗ್ಲಾಸ್ ಒಡೆದರೆ ಔಟ್, ಬರೀ ಗ್ಲಾಸನ್ನು ಮಾತ್ರ ಕೈಯಿಂದ ಒಡೆಯಬೇಕು ಎನ್ನುವುದು ಈ ಟಾಸ್ಕ್ ನಿಯಮವಾಗಿತ್ತು. ಸ್ಟ್ರಾಟರ್ಜಿ ಉಪಯೋಗಿಸಿ ಮಂಜು ಗೆಲಲುವು ಸಾಧಿಸಿದ್ದು, ಕ್ಯಾಪ್ಟನ್ ಆಗಿದ್ದಾರೆ.
38 ಗಂಟೆಗೂ ಹೆಚ್ಚಿನ ಸಮಯ ಕುರ್ಚಿ ಪಾಲಿಟಿಕ್ ಟಾಸ್ಕ್ನಲ್ಲಿ ಭಾಗಿಯಾಗುವ ಮೂಲಕ ಮಂಜು ಪಾವಗಡ ಗೆಲ್ಲುವ ಮೂಲಕ ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿದ್ದಾರೆ. ನಂತರ ಚಾಲೆಂಜರ್ಸ್ ತಂಡದ ಕಡೆಯಿಂದ ನಡೆದ ಮೊಟ್ಟೆ ಹಾಗೂ ಗ್ಲಾಸ್ ಟಾಸ್ಕ್ನಲ್ಲಿ ಮಂಜು ಗೆಲ್ಲುವ ಮೂಲಕ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದಿದ್ದಾರೆ.
ಈ ಕುರಿತಾಗಿ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕೇಳಿದಾಗ ಮಹಿಳಾ ಸ್ಪರ್ಧಿಗಳು ಉತ್ತರ ನೀಡಿದ್ದಾರೆ.. ನಾವು ಸ್ಪರ್ಧೆ ಮಾಡುತ್ತಿದ್ದೇವೆ, ಆದರೆ ಲಕ್ ಇಲ್ಲ ಎಂದು ಎನ್ನಿಸುತ್ತದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ.








