ರಾಮನಗರ: ನಿನ್ನೆ ಅಪಘಾತದಲ್ಲಿ ಸಾವನ್ನಪ್ಪಿದ ಖಾಸಗಿ ಸುದ್ದಿ ವಾಹಿನಿ ಪತ್ರಕರ್ತ ಹನುಮಂತು ಅವರ ಕುಟುಂಬಸ್ಥರಿಗೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪರಿಹಾರದ ಚೆಕ್ ವಿತರಿಸಿದ್ದಾರೆ.
ಮೃತರ ಮನೆಗೆ ಭೇಟಿ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಿನ್ನೆ ಘೋಷಣೆ ಮಾಡಿದ್ದಂತೆ 5 ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರದ ಚೆಕ್ ನ್ನು ಹನುಮಂತು ಪತ್ನಿಗೆ ನೀಡಿದರು. ಚೆಕ್ ನೀಡಿ ಹನುಮಂತು ಪತ್ನಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ, ಅವರನ್ನು ಮನೆ ಮಗಳಂತೆ ನೋಡಿಕೊಳ್ಳಿ ಎಂದು ಕುಟುಂಬಸ್ಥರಿಗೆ ಹೇಳಿದರು.
ನಿನ್ನೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಹನುಮಂತು ವಾಪಾಸ್ ಬೈಕ್ ನಲ್ಲಿ ಮರಳುತ್ತಿದ್ದಾಗ ಎಟಿಎಂಗೆ ಹಣ ಸಾಗಿಸುವ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದರು.