ದೇಶದಲ್ಲಿ 4ನೇ ಲಸಿಕೆಯಾಗಿ ಬಳಕೆಯಾಗಲಿದೆ ಅಮೆರಿಕಾದ ‘ಮಡೆರ್ನಾ’
ನವದೆಹಲಿ: ಒಂದೆಡೆ ಕೋವಿಡ್ ಹಾವಳಿ ತಪ್ಪಿಸಲು ವ್ಯಾಕ್ಸಿನ್ ರಾಮಬಾಣದಂತೆ ಕೆಲಸ ಮಾಡ್ತಿದ್ದರೆ, ಕೇಮದ್ರ ಸರ್ಕಾರವು ಲಸಿಕೆ ಹಾಕಿಸುವಿಕೆಯನ್ನೂ ಮತ್ತಷ್ಟು ಉತ್ತೇಜಿಸುತ್ತಿದೆ.. ಈ ನಡುವೆ ಸ್ವದೇಶಿ ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಜೊತೆಗೆ ಈಗಾಗಲೇ ರಷ್ಯಾದ ಸ್ಪುಟ್ನಿಕ್ ಲಸಿಕೆ ಬಳಕೆಗೂ ಅನುಮತಿ ನೀಡಲಾಗಿತ್ತು.. ಇದೀಗ ಬಳಕೆಗಾಗಿ ಅಮೆರಿಕಾದ ಮಡೆರ್ನಾ ಲಸಿಕೆಗೂ ಅನುಮತಿ ನೀಡಿದೆ.. ಈ ಮೂಲಕ ದೇಶದಲ್ಲಿ 4ನೇ ಲಿಕೆಯಾಗಿ ಮಡೆರ್ನಾ ಎಂಟ್ರಿ ಪಡೆದುಕೊಂಡಿದೆ..
ಶೇ.94.1ರಷ್ಟು ಸಾಮರ್ಥ್ಯ ಹೊಂದಿರುವ ಮಡೆರ್ನಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಡೆರ್ನಾ ಲಸಿಕೆಯನ್ನು ಸಿಪ್ಲಾ ಕಂಪನಿಯ ಆಮದು ಹಾಗೂ ಮಾರಾಟ ಮಾಡುವುದಕ್ಕೆ ಡಿಸಿಜಿಐ ಸಿಗ್ನಲ್ ಕೊಟ್ಟಿದೆ. ಫೈಜರ್ ಕೂಡ ಶೀಘ್ರವೇ ಭಾರತಕ್ಕೆ ಬರುವ ಸಾಧ್ಯತೆ ಇದೆ. ಜುಲೈನಲ್ಲಿ ಲಸಿಕೆ ಕೊರತೆ ನೀಗಬಹುದು ಎನ್ನಲಾಗ್ತಿದೆ. ದಿನಕ್ಕೆ 1 ಕೋಟಿ ಲಸಿಕೆ ವಿತರಣೆ ಗುರಿ ಹೊಂದಿರುವುದಾಗಿ ಸುಪ್ರೀಂಕೋರ್ಟ್‍ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಮೇನಿಂದ ಜುಲೈವರೆಗೆ 16 ಕೋಟಿ ಲಸಿಕೆ ಕೇಳಲಾಗಿತ್ತು. ಈ ಪೈಕಿ ಸೆರಂನಿಂದ 11 ಕೋಟಿ ಕೋವಿಶೀಲ್ಡ್ ಲಸಿಕೆ ಪೈಕಿ ಸದ್ಯ 3.43 ಕೋಟಿ ಮಾತ್ರ ಸಿಕ್ಕಿದೆ. ಕೋವ್ಯಾಕ್ಸಿನ್‍ನಿಂದಲೂ 5 ಕೋಟಿ ಲಸಿಕೆ ಖರೀದಿಸಿದ್ದೇವೆ. ಮೇ-ಜುಲೈ ಕೋಟಾದ ಕೋವಾಕ್ಸಿನ್ ಲಸಿಕೆ ಇನ್ನೂ ಪೂರೈಕೆ ಆಗಿಲ್ಲ. ಹಾಗಾಗಿ ಜುಲೈನಲ್ಲಿ ಸಿಗುವ ಭರವಸೆ ಇದೆ ಅಂತ ಅಫಿಡವಿಟ್‍ನಲ್ಲಿ ಕೇಂದ್ರ ಉಲ್ಲೇಖಿಸಿದೆ.