DRDO ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ವಿಧಿವಶ
ಬೆಂಗಳೂರು : ಡಿಆರ್ ಡಿಒ ಮಾಜಿ ವಿಜ್ಞಾನಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಧಿವಶರಾಗಿದ್ದಾರೆ.
ಅವರಿಗೆ ವಾರದ ಹಿಂದೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಇಂದು ಮಧ್ನಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನ ಬರಹಗಳ ಮೂಲಕ ಜನರ ಮೆಚ್ಚುಗೆ ಪಡೆದಿದ್ದರು.
ಕನ್ನಡದ ಹಲವು ಪತ್ರಿಕೆಗೆ ಅಂಕಣವನ್ನೂ ಸಹ ಬರೆಯುತ್ತಿದ್ದರು.
ಹಾಗೆಯೇ ‘ಕನ್ನಡದಲ್ಲಿ ವಿಜ್ಞಾನ ಸಂವಹನ ಸವಾಲುಗಳು’ ಎಂಬುದರ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ.