‘ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್ 3ನೇ ಅಲೆ ಗರಿಷ್ಟ ಮಟ್ಟಕ್ಕೆ ಏರಿಕೆ’
ನವದೆಹಲಿ : ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ.
ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಈ ನಡುವೆ ಡೆಲ್ಟಾ ಆತಂಕ ಶುರುವಾಗಿದೆ.. ದೇಶದಲ್ಲಿ ಅನೇಕ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿದ್ದು, ಕೋವಿಡ್ 2ನೇ ಅಲೆ ಮುಗಿತು ಅನ್ನೋ ನಿರಾಳತೆಯಲ್ಲಿರುವ ಜನರಿಗೆ 3ನೇ ಅಲೆ ಆತಂಕ ಶುರುವಾಗಿದೆ.. ಇದೀಗ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವುದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಅಕ್ಟೋಬರ್ ನವಂಬರ್ ಸಂದರ್ಭದಲ್ಲಿ 3ನೇ ಅಲೆ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂದು ಸರ್ಕಾರಿ ಕೋವಿಡ್ ನಿರ್ವಹಣೆಯ ಸಮಿತಿಯ ತಜ್ಞ ಮಣೀಂದ್ರ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಹೌದು 3ನೇ ಅಲೆಯ ಸಂದರ್ಭದಲ್ಲಿ ದಿನಕ್ಕೆ ಎರಡನೇ ಅಲೆಯ ಸಂದರ್ಭದಲ್ಲಿ ಇರುತ್ತಿದ್ದ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಕೊರೊನಾ ವೈರಸ್ ನ ಹೊಸ ರೂಪಾಂತರ ‘ಸಾರ್ಸ್-ಕೋವ್-2’ (SARS-CoV-2) ಹರಡಿದರೆ 3ನೇ ಅಲೆಯಲ್ಲಿ ಕೋವಿಡ್ ಸೋಂಕು ಅತ್ಯಂತ ವೇಗವಾಗಿ ಹರಡುವ ವಿಷಯದ ಬಗ್ಗೆಯೂ ಕೂಡ ಎಚ್ಚರಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಣೀಂದ್ರ ಅವರು, ರೋಗ ನಿರೋಧಕ ಶಕ್ತಿ ನಷ್ಟ, ಲಸಿಕಾ ಅಭಿಯಾನ ಕಾರ್ಯಕ್ರಮಗಳ ಪರಿಣಾಮಗಳು ಹಾಗೂ ಸೋಂಕಿನ ಅಧಿಕ ರೂಪಾಂತರಿಗಳ ಸಾಧ್ಯತೆಗಳು ಮುಖ್ಯ ಅಂಶಗಳಾಗಿವೆ ಎಂದಿದ್ದಾರೆ.
ಈ ಪ್ರಮುಖ ಅಂಶಗಳು ಎರಡನೇ ಅಲೆಯ ಮುನಸ್‌ಊಚನೆಗಳನ್ನು ರಚಿಸುವಾಗ ಇದ್ದಿರಲಿಲ್ಲ, ಈ ಕುರಿತಾಗಿ ವಿಸ್ತೃತ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ನಾವು ಮೂರು ಸನ್ನಿವೇಶಗಳನ್ನು ರಚಿಸಿದ್ದೇವೆ, ಒಂದು ಆಶಾವಾದಿಯಾಗಿದೆ, ಆಗಸ್ಟ್ ವೇಳೆಗೆ ಜೀವನವು ಸಾಮಾನ್ಯ ಸ್ಥಿತಿಗೆ ಬರಲಿದ್ದು, ಮತ್ತು ಹೊಸ ರೂಪಾಂತರಿಗಳ ಸೃಷ್ಟಿಯಾಗುವುದಿಲ್ಲಬವ ಎಂದು ಭಾವಿಸುತ್ತೇವೆ. ಇನ್ನೊಂದು ಮಧ್ಯಂತರವಾಗಿದ್ದು, ಇದರಲ್ಲಿ ಆಶಾವಾದಿ ಸನ್ನಿವೇಶದೊಂದಿಗೆ ಹೆಚ್ಚುವರಿಯಾಗಿ ವ್ಯಾಕ್ಸಿನೇಷನ್ ಶೇಕಡಾ 20 ರಷ್ಟು ಕಡಿಮೆ ಪರಿಣಾಮಕಾರಿ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ಅಂತಿಮ ಸನ್ನಿವೇಶದಲ್ಲಿ ಮಧ್ಯಂತರಕ್ಕಿಂತ ಸನ್ನಿವೇಶಕ್ಕಿಂತ ಭಿನ್ನವಾಗಿವೆ. ಆಗಸ್ಟ್ ನಲ್ಲಿ ಹೊಸದಾಗಿ ಶೇಕಡಾ 25 ರಷ್ಟು ಹೆಚ್ಚು ಸಾಂಕ್ರಾಮಿಕ ರೂಪಾಂತರಿ ಸೋಂಕುಗಳು ಸೃಷ್ಟಿಯಾಗಿ ಹರಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ. ಆಗಸ್ಟ್ ಮಧ್ಯದ ವೇಳೆಗೆ ಎರಡನೇ ಅಲೆಯ ಸೋಂಕು ಇಳಿಮುಖವಾಗುವ ಸಾಧ್ಯತೆ ಇದ್ದು, ಅಕ್ಟೋಬರ್ ಮತ್ತು ನವೆಂಬರ್ ನಡುವೆ ಮೂರನೇ ಅಲೆಯು ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತೋರಿಸಿದ ಗ್ರಾಫ್ ಅನ್ನು ಸಹ ಅವರು ಇನ್ನೊಂದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿನಕ್ಕೆ 1.5 ಲಕ್ಷದಿಮದ 2 ಲಕ್ಷದ ತನಕ ಕೋವಿಡ್ ಸೋಂಕು ದಾಖಲಾಗುವ ಸಾಧ್ತತೆ ಇದೆ ಎಂದೂ ಕೂಡ ಎಚ್ಚರಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.