ಅಮೆಜಾನ್ ಸಿಇಒ ಹುದ್ದೆ ಬಿಟ್ಟು ತೆರಳಿದ ಜೆಫ್ ಬೆಜೋಸ್
ನ್ಯೂಯಾರ್ಕ್: ಅಮೆಜಾನ್ ಸಿಇಓ ಸ್ಥಾನಕ್ಕೆ ಜೆಫ್ ಬೆಜೋಸ್ ಇಂದು ರಾಜೀನಾಮೆ ನೀಡಿದ್ದಾರೆ. ಹೌದು… ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಯಿಂದ ಜೆಫ್ ಬೆಜೋಸ್ ನಿರ್ಗಮಿಸುತ್ತಿದ್ದಾರೆ.
ಅಮೆಜಾನ್ ಸಿಇಒ ಸ್ಥಾನವನ್ನು ಜುಲೈ 5ರಂದು ಆಂಡಿ ಜಾಸಿಗೆ ಜೆಫ್ ಬೆಜೋಸ್ ಹಸ್ತಾಂತರಿಸಲಿದ್ದಾರೆ. ನಂತರ ಜೆಫ್, ಖಾಸಗಿ ಬಾಹ್ಯಾಕಾಶ ಯಾನ ಯೋಜನೆ ಹಾಗೂ ಇತರ ಕೆಲವೊಂದು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
27 ವರ್ಷಗಳ ಹಿಂದೆ ಕೇವಲ ಪುಸ್ತಕಗಳನ್ನ ಮಾರಾಟ ಮಾಡುವ ಸಲುವಾಗಿ ಆರಂಭವಾದ ಈ ಕಂಪನಿ ಇದೀಗ ಬರೋಬ್ಬರಿ 1.7 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟುಗಳನ್ನ ನಡೆಸುತ್ತಿದೆ. ಪ್ರಸ್ತುತ ಅಮೆಜಾನ್ ಜಗತ್ತಿನ ಅತ್ಯಂತ ಪ್ರಮುಖ ಮತ್ತು ಅತಿ ದೊಡ್ಡ ಜಾಲ ಹೊಂದಿರುವ ಇ ಕಾಮರ್ಸ್ ತಾಣವಾಗಿ ಬೆಳೆದು ನಿಂತಿದೆ.
ಜೆಫ್ ಬೆಜೋಸ್ ತಮ್ಮ ಸಿಇಓ ಸ್ಥಾನವನ್ನ ಆಯಂಡಿ ಜೆಸ್ಸಿಗೆ ಹಸ್ತಾಂತರಿಸಲಿದ್ದಾರೆ. ಜೆಫ್ ಬೆಜೋಸ್ ಕಂಪನಿಯಲ್ಲಿ ಮುಖ್ಯಸ್ಥನ ಸ್ಥಾನದಲ್ಲಿ ಇದ್ದರೂ ಸಹ ಇನ್ಮೇಲೆ ಕಂಪನಿಯ ದೈನಂದಿನ ಬೆಳವಣಿಗೆಗಳ ಮೇಲೆ ಬೆಜೋಸ್ ಗಮನ ಹರಿಸೋದಿಲ್ಲ.
ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ ಹಾಗೂ ಇತರೆ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಬೆಜೋಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಸಿಇಒ ಹುದ್ದೆಯಿಂದ ನಿರ್ಗಮಿಸಿದರೂ, ಅಮೆಜಾನ್‌ನಲ್ಲಿ ಮುಖ್ಯ ಸ್ಥಾನವೊಂದರಲ್ಲಿ ಜೆಫ್ ಮುಂದುವರಿಯಲಿದ್ದಾರೆ.