ಟ್ವಿಟ್ಟರ್ ನಲ್ಲಿ ಬಾಯ್ಕಟ್ ಅಮಿರ್ ಖಾನ್ ಟ್ರೆಂಡ್ – ಅಮಿರ್ ಖಾನ್ ವಿರುದ್ಧ ಸಿಡಿದೆದ್ದ ನೆಟ್ಟಿಗರು
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ನ ದಾಂಪತ್ಯ ಜೀವನವೇ ತಲೆಕೆಳಗೆ ಆಗಿದೆ.. 15 ವರ್ಷಗಳ ದಾಂಪತ್ಯಕ್ಕೆ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಅವರು ವಿದಾಯ ಹೇಳಿ ಬೇರೆ ಬೇರೆಯಾಗಿದ್ದಾರೆ..
ಇತ್ತೀಚೆಗೆ ಅಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದರು..
ಇದೀಗ 2ನೇ ಪತ್ನಿಗೆ ವಿಚ್ಛೇದನ ನೀಡಿದ ಬೆನ್ನಲ್ಲೇ ಅಮೀರ್ ಖಾನ್ ನಿಷೇಧಕ್ಕೆ ನೆಟ್ಟಿಗರು ಒತ್ತಾಯ ಮಾಡ್ತಿದ್ದಾರೆ.. ಅಲ್ಲದೇ ಅಮಿರ್ ಕಾನ್ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗ್ತಿದೆ..
ಹೌದು.. ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಮೊದಲ ಪತ್ನಿಯ ಜೊತೆ 16 ವರ್ಷ ಸಂಸಾರ ನಡೆಸಿ ವಿಚ್ಛೇದನ ನೀಡಿ ಬಳಿಕ ಕಿರಣ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಮೀರ್ ಖಾನ್ 15 ವರ್ಷದ ಬಳಿಕ 2ನೇ ಪತ್ನಿಯಿಂದನೂ ದೂರ ಆಗಿದ್ದಾರೆ.
ಆಮೀರ್ ಖಾನ್ ಈ ನಿರ್ಧಾರ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ನಲ್ಲಿ ಆಮೀರ್ ಖಾನ್ ನಿಷೇಧಿಸುವಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಟ್ವಿಟ್ಟರ್ನಲ್ಲಿ #Boycottaamirkhan ಎಂದು ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಮೀರ್ ಖಾನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ‘ಇಬ್ಬರೂ ಹಿಂದು ಯುವತಿಯನ್ನು ಮದುವೆಯಾಗಿ 3 ಮುಸ್ಲಿಂ ಮಕ್ಕಳಿಗೆ ಜನ್ಮ ನೀಡಿದ್ದಾರೆ’ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಲವ್ ಜಿಹಾದ್ ಆಮೀರ್ ಖಾನ್ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿ ಆಮೀರ್ ಖಾನ್ನನ್ನು ಬ್ಯಾನ್ ಮಾಡಿ ಕಿಡಿ ಕಾರುತ್ತಿದ್ದಾರೆ. ‘ಇಂಥ ಲವ್ ಜಿಹಾದಿಗಳ ಸಿನಿಮಾ ನೋಡಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ಆಮೀರ್ ಖಾನ್ ‘ಲವ್ ಜಿಹಾದ್ನ ಅಂಬಾಸಿಡರ್’ ಎಂದು ನೆಟ್ಟಿಗರು ಜರಿಯುತ್ತಿದ್ದಾರೆ.
ಇನ್ನು ನಟ ಆಮೀರ್ ಖಾನ್ ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಅಕ್ಕ-ಪಕ್ಕದಲ್ಲೇ ಕುಳಿತು, ಕೈ ಕೈ ಹಿಡಿದು ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ನಮ್ಮ ನಿರ್ಣಯದಿಂದ ಕೆಲವರಿಗೆ ಶಾಕ್ ಆಗಿರಬಹುದು, ಕೆಲವರಿಗೆ ಬೇಸರ ಆಗಿರಬಹುದು. ಆದರೆ ನಾವು ನಿಮಗೆ ಹೇಳಲಿಚ್ಛಿಸುವುದು ಇಷ್ಟೆ ನಾವಿಬ್ಬರೂ ಆರಾಮವಾಗಿದ್ದೇವೆ. ಖುಷಿಯಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ ಆದರೆ ನಮ್ಮ ಸಂಬಂಧ ತುಸು ಬದಲಾಗಿದೆ ಅಷ್ಟೆ ಎಂದು ಅಮೀರ್ ಖಾನ್ ಹೇಳಿದ್ದಾರೆ.