ಅನ್ಲಾಕ್ 3.0 – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಜ ಸ್ಥಿತಿಗೆ ಮರಳಿದ ಜೀವನ
ಸುಮಾರು ಎರಡು ತಿಂಗಳ ಕಟ್ಟುನಿಟ್ಟಿನ ಲಾಕ್‌ಡೌನ್ ನಂತರ, ರಾಜ್ಯ ಸರ್ಕಾರವು ಜುಲೈ 5 ರಿಂದ ಜುಲೈ 19 ರವರೆಗೆ ಅನ್ಲಾಕ್ 3.0 ಅನ್ನು ಘೋಷಿಸಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವನವು ಸಹಜ ಸ್ಥಿತಿಗೆ ಮರಳಿದೆ.
ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿರುವ ಕಾರಣ ಮತ್ತು ರಸ್ತೆಗಳನ್ನು ಅಗೆಯುತ್ತಿರುವುದರಿಂದ ನಗರದಲ್ಲಿ ವಾಹನಗಳ ಭಾರಿ ದಟ್ಟಣೆ ಕಂಡುಬಂದಿದೆ.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಆದೇಶದಂತೆ ಜಿಲ್ಲೆಗೆ ಪ್ರತ್ಯೇಕ ಮಾರ್ಗಸೂಚಿಗಳಿಲ್ಲ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು.
ಅನ್ಲಾಕ್ 3.0 ನಲ್ಲಿ ಹೆಚ್ಚಿನ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಮತ್ತು ಎಲ್ಲಾ ಚಟುವಟಿಕೆಗಳನ್ನು ರಾತ್ರಿ 9 ರವರೆಗೆ ಅನುಮತಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದಲ್ಲದೆ, ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಮಾಲ್‌ಗಳನ್ನು ಸಹ ತೆರೆಯಲಾಗಿದೆ. ಬಸ್ಸುಗಳು ಸಹ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಬಹುದು.
ಆದರೆ, ಮುಂದಿನ ಆದೇಶ ಬರುವವರೆಗೂ ಚಿತ್ರಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಿರುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಪ್ರತಿ ತಿಂಗಳು ಕೇವಲ 2853 ರೂ.ಗಳ ಪ್ರೀಮಿಯಂ ಪಾವತಿಸಿ, 14 ಲಕ್ಷದವರೆಗೆ ಆದಾಯ ಪಡೆಯಿರಿ#postoffice https://t.co/UbCyYfe7E0
— Saaksha TV (@SaakshaTv) July 4, 2021
ಆಲೂಗಡ್ಡೆ ರೋಲ್ ಸಮೋಸಾ#potato #roll #samosa https://t.co/pQicXGPBUY
— Saaksha TV (@SaakshaTv) July 3, 2021
ಕೆಮ್ಮು ಮತ್ತು ಶೀತದಂತಹ ಸಮಸ್ಯೆಯನ್ನು ಆಗಾಗ್ಗೆ ಎದುರಿಸುತ್ತಿದ್ದರೆ ಇಲ್ಲಿದೆ ಮನೆಮದ್ದುಗಳು#Saakshatv #healthtips #homeremedies https://t.co/HYxhsGty5o
— Saaksha TV (@SaakshaTv) July 3, 2021
ನಿಪ್ಪಟ್ಟು#Saakshatv #cookingrecipe #nippattu https://t.co/zlCk45Y8NM
— Saaksha TV (@SaakshaTv) July 4, 2021
ರಕ್ತಹೀನತೆಯ ಲಕ್ಷಣಗಳು ಮತ್ತು ಅದಕ್ಕೆ ಪರಿಹಾರ#Saakshatv #healthtips #anemia https://t.co/UvtqBfbCP2
— Saaksha TV (@SaakshaTv) July 4, 2021
#Unlock3.0 #normal #Mangaluru