ಸಿಎಂ ಬದಲಾಯಿಸದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ : ಯತ್ನಾಳ
ಸ್ವಪಕ್ಷದ ವಿರುದ್ಧ ಸದಾ ಕಡಿಕಾರುತ್ತಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರಿದ್ಧ ಕಿಡಿಕಾರಿದ್ದಾರೆ.
ಹೌದು ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸದಿದ್ದರೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಉಳಿಗಾಲವಿರಲ್ಲ ಎಂದು ಯತ್ನಾಳ್ ಕಿಡಿಕಾರಿದ್ಧಾರೆ. ಅಲ್ಲದೇ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಆಡಳಿತದ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿವೆ. ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಬದಲಾವಣೆ ನಿಶ್ಚಿತ ಎಂದಿದ್ದಾರೆ.
ಮುಂದುವರೆದು ಮಾತನಾಡಿರೋ ಯತ್ನಾಳ್ ಅವರು , ಮಹಾಭಾರತದಲ್ಲಿ ಕೌರವರಿಗೆ ಭೀಷ್ಮ, ದ್ರೋಣಾಚಾರ್ಯರ ಬೆಂಬಲ ಸಿಕ್ಕಿದಂತೆ ನಮ್ಮಲ್ಲೂ ಈ ಲೂಟಿಕೋರರಿಗೆ ಕೆಲವರ ಬೆಂಬಲವಿದೆ. ಕೊನೆಗೆ ಧರ್ಮವೇ ಗೆಲ್ಲಲಿದೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರು, ಭ್ರಷ್ಟರನ್ನು ಸಂಹರಿಸು ತಾಯಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿಕೊಂಡಿರುವೆ ಎಂದು ತಿಳಿಸಿದ್ದಾರೆ.
ಇನ್ನೂ ವಿರೋಧಪಕ್ಷದವರು ಲೂಟಿ ನಡೆಯುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ತಮ್ಮ ಪಾವಿತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಕೆಲವರು ಲೂಟಿಕೋರರ ಬ್ಯುಸಿನೆಸ್ ಪಾರ್ಟನರ್‌ಗಳಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ಧಾರೆ. ಲಿಂಗಾಯತರಲ್ಲಿ ಪರ್ಯಾಯ ನಾಯಕರು ಅನೇಕರಿದ್ದಾರೆ. ಆದರೆ, ತಮ್ಮ ಪುತ್ರನ ರಾಜಕೀಯಕ್ಕಾಗಿ ಯಡಿಯೂರಪ್ಪ, ಬಿಜೆಪಿಗೆ ಈ ನಾಯಕತ್ವವನ್ನೇ ನಾಶಗೊಳಿಸುತ್ತಿದ್ದಾರೆ ಎಂದು ಇದೇ ವೇಳೆ ಯತ್ನಾಳ್ ಅವರು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಲಿಂಗಾಯತರ ನಾಯಕತ್ವವನ್ನಷ್ಟೇ ನಾಶ ಮಾಡಿಲ್ಲ. ವಾಲ್ಮೀಕಿ, ಕುರುಬರ ನಾಯಕತ್ವವನ್ನೂ ಹಾಳು ಮಾಡಿದ್ದಾರೆ. ಶ್ರೀರಾಮುಲು ಆಪ್ತ ಸಹಾಯಕನನ್ನು ಬಂಧಿಸಿದ್ದರ ಹಿಂದೆ ವಿಜಯೇಂದ್ರನ ಯಾವ ಮರ್ಮವಿದೆ. ಸಿಸಿಬಿ ಪೊಲೀಸರು ಮುಖ್ಯಮಂತ್ರಿಯ ಅಧಿಕೃತ ನಿವಾಸ ಕಾವೇರಿ ಹಿಂದಿರುವ ಗೆಸ್ಟ್‌ಹೌಸ್ ಮೇಲೆ ರೇಡ್ ಮಾಡಲಿ. ಅಲ್ಲಿಯೇ ಕೋಟಿ ಕೋಟಿ ಡೀಲ್ ನಡೆಯೋದು ಎಂದು ಆರೋಪಿಸಿದ್ಧಾರೆ.
‘ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೂ ಕೊಡಲಾಗದು’ : ಸರ್ಕಾರದ ವಿರುದ್ಧ ಸಿ.ಪಿ ಯೋಗೇಶ್ವರ್ ಕಿಡಿ