ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ : ಪಾಕ್ ಆರೋಪ
ಮುಂಬೈ 2008ರ ದಾಳಿಯ ಮಾಸ್ಟರ್ ಮೈಂಡ್ ಉಗ್ರ (ನಿಷೇಧಿತ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ) ಹಫೀಜ್ ಸಯೀದ್ ನ ಪಾಕಿಸ್ತಾನದ ಲಾಹೋರ್ ನಿವಾಸದ ಬಳಿ ಸ್ಪೋಟವಾಗಿತ್ತು..
ಇದೀಗ ಕಳೆದ ತಿಂಗಳು ನಡೆದ ಸ್ಫೋಟದ ಹಿಂದೆ ಭಾರತೀಯ ನಾಗರಿಕನ ಕೈವಾಡವಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಆರೋಪಿಸಿದ್ದಾರೆ.
ಹೌದು ಪಾಕಿಸ್ತಾನದ ಪಂಜಾಬ್ ಪೊಲೀಸ್ ಮುಖ್ಯಸ್ಥ ಇನಾಮ್ ಘಾನಿ ಹಾಗೂ ಮಾಹಿತಿ ಸಚಿವ ಫವಾದ್ ಚೌಧರಿ ಅವರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯೂಸುಫ್, ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವ ಭಾರತೀಯ ನಾಗರಿಕ ದಾಳಿಯ ಹಿಂದಿನ ಸೂತ್ರಧಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಜೂನ್ 23ರಂದು ಲಾಹೋರ್‌ನ ಜೋಹರ್ ಟೌನ್‌ನಲ್ಲಿರುವ ಬೋರ್ಡ್ ಆಫ್ ರೆವೆನ್ಯೂ ಹೌಸಿಂಗ್ ಸೊಸೈಟಿಯಲ್ಲಿ ಹಫೀಜ್ ಮನೆ ಬಳಿ ಸಂಭವಿಸಿದ ಪ್ರಬಲ ಕಾರು ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದರು. 24 ಮಂದಿ ಗಾಯಗೊಂಡಿದ್ದರು.